ಸಖಿ ವಾರಿಜ ಹಾರವನಾ ಶ್ರೀಕೃಷ್ಣನ
ಕೊರಳಿಗೆ ಹಾಕುವೆನಾ ಪ
ಕುಂದಮಲ್ಲಿಗೆ ಅರವಿಂದಗಳಿಂದತಿ
ಸುಂದರ ಹಾರವನಾ ಮು-
ಕ್ಕುಂದನ ಕೊರಳಿಗೆ ಹಾಕುವೆನಾ 1
ನಾರಿ ದ್ರೌಪದಿಗೆ ಸೀರೆಗಳುಡಿಸಿದ
ಪಾರ ಮಹಿಮದವನಾ ಸಖಿಯೇ ಆ
ಪಾರ ಮಹಿಮದವನಾ 2
ಕರುಣದಿ ಶರಣರ ಪೊರಿಯುವ 'ಕಾರ್ಪರ
ನರಹರಿ ಯೆನಿಸುವನಾ ಸಖಿಯೆ
ನರಹರಿಯೆನಿಸುವನಾ ನರಸಿಂಹನ ಕೊರಳಿಗೆ ಹಾಕುವೆನಾ 3
****