Showing posts with label ಗುರುಗಳ ನೆರೆ ನಂಬಿರೊ ಪರಿಪಾಲಿಪ kamalanabha vittala. Show all posts
Showing posts with label ಗುರುಗಳ ನೆರೆ ನಂಬಿರೊ ಪರಿಪಾಲಿಪ kamalanabha vittala. Show all posts

Thursday, 5 August 2021

ಗುರುಗಳ ನೆರೆ ನಂಬಿರೊ ಪರಿಪಾಲಿಪ ankita kamalanabha vittala

..kruti by Nidaguruki Jeevubai

ಗುರುಗಳ ನೆರೆ ನಂಬಿರೊ ಪರಿಪಾಲಿಪ

ಗುರುಗಳ ನೆರೆ ನಂಬಿರೊ ಪ


ಪರಿ ಪರಿ ಅಘದೊಳು ತೊಳಲುವ ಮನು

ಜರ ಬವಣೆಗಳರಿತು ಸಜ್ಜನರ ಪಾಲಿಸುವಂಥ ಅ.ಪ

ಚಿಂತೆಯೆಲ್ಲವು ನೀಗಿಸಿ ಮನಸಿಗೆ ಬಹು

ಸಂತೋಷವನು ಸೂಚಿಸಿ

ಕಂತುಪಿತನ ಪಾದ ಚಿಂತನೆ ಮಾಡುವ

ಅಂತರಂಗದ ಭಕ್ತರೊಡನೆ ಮೆರೆವ ದಿವ್ಯ1


ಬೆಟ್ಟದೊಡೆಯನ ಪೂಜಿಸಿ ಭಕುತರ ಮನ

ದಿಷ್ಟಗಳನು ಸಲ್ಲಿಸಿ

ಸೃಷ್ಟಿಕರ್ತನ ಗುಣ ಸ್ವಚ್ಛ ತಿಳಿದು ಸರ್ವ

ಕಷ್ಟಗಳ್ಹರಿಸಿ ಸಂತುಷ್ಟಿಪಡಿಸುವಂಥ 2


ಸರಿಯುಂಟೆ ಧರೆಯೊಳಗೆ ಗುರುಗಳ ಪೋಲ್ವ

ನರರುಂಟೆ ಭುವಿಯೊಳಗೆ

ಸಿರಿ ಉರಗಾದ್ರಿವಸ ವಿಠ್ಠಲದಾಸರ ಕೂಡಿ

ವರಗಳ ಕೊಡುವಂಥ ಪರಮ ಸಾತ್ವಿಕರಾದ 3


ಪರಮ ಮಂಗಳ ಮೂರ್ತಿಯ ರೂಪವ ಹಗ

ಲಿರುಳು ಧ್ಯಾನವ ಮಾಳ್ಪರ

ಪರಮ ಗುರುಗಳ ಪರಮ ಪ್ರೀತಿಯ ಪಡೆದಂಥ

ಉರಗಾದ್ರಿವಾಸ ವಿಠ್ಠಲದಾಸರೆಂಬಂಥ4


ಕರುಣದಿ ಸಲಹುವರು ಭಕ್ತರನೆಲ್ಲ

ಕರೆದು ಬೋಧನೆ ಮಾಳ್ಪರು

ವರ ಕಮಲನಾಭ ವಿಠ್ಠಲನ ಭಜಿಸುತ್ತ

ಸಿರಿ ಶ್ರೀನಿವಾಸನ ನಿರುತ ಪೂಜಿಸುವಂಥ 5

***