Showing posts with label ನಮೋ ನಮೋ ಶಚಿ ವಲ್ಲಭತೇ pranesha vittala. Show all posts
Showing posts with label ನಮೋ ನಮೋ ಶಚಿ ವಲ್ಲಭತೇ pranesha vittala. Show all posts

Wednesday, 13 November 2019

ನಮೋ ನಮೋ ಶಚಿ ವಲ್ಲಭತೇ ankita pranesha vittala

by ಪ್ರಾಣೇಶದಾಸರು
ನಮೋ ನಮೋ ಶಚಿ ವಲ್ಲಭತೇ |ರಮೆಯ ರಮಣನಲಿ ನೀಡು ಮತೆ ಪ

ಹತ್ತು ಕಲ್ಪಗಳಲ್ಲಿ | ಉತ್ತಮ ಶ್ಲೋಕನ ||ತತ್ವ ವಿಚಾರ ಮಾಡ್ದೆ | ಚಿತ್ತಶುದ್ಧದಿ1

ಮೂರೊಂದರ್ಧಾ ಕಲ್ಪ |ಚಾರುತಪಸ್ಸು ಮಾಡಿ ||ನಾರಾಯಣನ ಕಂಡ |ಸೂರಿಗಮ್ಯಾ 2

ಪ್ರಾಣೇಶ ವಿಠ್ಠಲನ | ನೀನೊಲಿಸೀದೆ ಪೊಗೆ ||ಯಾನುಂಡು ಕೋಟಿವತ್ಸರನಾಕದಿ 3
******