Showing posts with label ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ ಸ್ವಾನಂದ ಸುಖಸದೋದಿತ ಸುಸಾಧನ mahipati. Show all posts
Showing posts with label ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ ಸ್ವಾನಂದ ಸುಖಸದೋದಿತ ಸುಸಾಧನ mahipati. Show all posts

Wednesday, 1 September 2021

ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ ಸ್ವಾನಂದ ಸುಖಸದೋದಿತ ಸುಸಾಧನ ankita mahipati

ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ ಸ್ವಾನಂದ ಸುಖಸದೋದಿತ ಸುಸಾಧನ ಪ 


ಘಮಿಘಮಿಸುವ ರವಿಕೋಟಿತೇಜನ ಠವಿಠವಿಸುದ ಕಂಡೆ ದಿವ್ಯಸ್ವರೂಪನ ಸವಿಸವಿ ಸುರುವ ಸುಖಸಂಬ್ರಹ್ಮನನು ಸೇವಿಸುವದು ಕಂಡೆ ಶುಕಮುನಿಜನ 1 

ಥಳಥಳಿಸುವ ತೇಜೋಮಯ ನಿಧಾನ ಝಳಝಳಿಸುದು ಕಂಡೆ ಹೊಳೆವ ಪ್ರಕಾಶನ ಒಳಹೊರಗೊಂದೇಪರಿ ಭಾಸುವ ಗುಣ ಹೇಳಲಿನ್ನೇನದ ಸುಳವ್ಹು ಸೂಕ್ಷ್ಮನ 2 

ಸಣ್ಣದೊಡ್ಡಾರೊಳಿಹ್ಯ ವಸ್ತುನಿರ್ಗುಣ ಬಣ್ಣಬಣ್ಣದಿ ಕಂಡ ಗುರುಸ್ವರೂಪನ ಕಣ್ಣಾರೆ ಕಂಡೆ ಸದ್ಗುರು ಚರಣ ಧನ್ಯಧನ್ಯವಾಯಿತು ಮಹಿಪತಿ ಜೀವನ 3

***