time 0.21 minutes
raga kedaragoula tala khandachapur
rendered by srI Ananda rAo, srIrangam
to aid learning the dAsara pada
ತಲ್ಲಣಿಸದಿರು ಕಂಡ್ಯ ತಾಳು ಮನವೆ || ಪ ||
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ಅ.ಪ. ||
ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ
ಪುಟ್ಟಿಸಿದ ಸ್ವಾಮಿ ತಾ ಹೊಣೆಗರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ || ೧ ||
ಅಡವಿಯೊಳಗಾಡುವ ಮೃಗ ಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೋ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ || ೨ ||
ನವಿಲಿಗೆ ಚಿತ್ರ ಬರೆದವರು ಯಾರು
ಪವಳದ ಲತೆಗೆ ಕೆಂಪಿಟ್ಟವರು ಯಾರು
ಸವಿಮಾತಿನರಗಿಳಿಗೆ ಹಸುರು ಬರೆದವರು ಯಾರು
ಅವನೆ ಸಲಹುವನು ಇದಕೆ ಸಂಶಯವಿಲ್ಲ || ೩ ||
ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲ
ಅಲ್ಲಲ್ಲಿಗಾಹಾರ ತಂದವರಾರು
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ || ೪ ||
***
Tallanisadiru kandya talu manave
Ellaranu salahuvanu idake samsaya beda ||pa||
Bettada tudiyalli huttida vrukshakke
Katteyanu katti nireredavaru yaru
Huttisida svami ta honegaranagiralu
Gatyagi salahuvanu idake samsayavilla ||1||
Adaviyolage mruga pakshigaligella
Adigadige aharavittavaru yaro
Padeda jananiya teradi svami honegidagi
Bidade rakshipanu idake samsayavilla ||2||
Navilige chitra baredavaru yaru
Pavalada latege kempittavaru yaru
Savimatinaragilige hasuru baredavaru yaru
Avane salahuvanu idake samsayavilla ||3||
Kallinalli hutti kuguva kappegaligella
Allalligaharavannu tandittavaru yaru
Ballidanu kagineleyadikesavaraya
Ellaranu salahuvanu idake samsayavilla ||4||
***