Showing posts with label ಕರುಣಿಸಯ್ಯ ರಘುವೀರನೆ ಸೇವಕ ನಾ ದೂರದಿ hanumesha vittala. Show all posts
Showing posts with label ಕರುಣಿಸಯ್ಯ ರಘುವೀರನೆ ಸೇವಕ ನಾ ದೂರದಿ hanumesha vittala. Show all posts

Tuesday, 1 June 2021

ಕರುಣಿಸಯ್ಯ ರಘುವೀರನೆ ಸೇವಕ ನಾ ದೂರದಿ ankita hanumesha vittala

 ಆತ್ಮನಿವೇದನೆ

ಕರುಣಿಸಯ್ಯ ರಘುವೀರನೆ ಸೇವಕ ನಾ ದೂರದಿ

ನೋಡದೆ ತ್ವರದಿ ಪ


ಹೆಂಡತಿ ಮಕ್ಕಳ ಭ್ರಾಂತಿಯೊಳನ್ಯರ ದಂಡಿಸಿ ಧನವ ಹರಿಸಿದೆನೋ

ಭಂಡತನದಲಿ ಪ್ರಚಂಡನಾದೆನೋ ಹರಿ ಪುಂಡರೀಕಾಕ್ಷನೇ 1


ಕಾಮನ ಬಾಧೆಯಿಂ ಕಾಮಿನಿಯರ ಕೂಡಿ ತಾಮಸನಾಗಿ

ನಾ ದಿನಗಳೆದೆ

ಹೇ ಮಹಾಭಾವನೇ ಪಾಮರನಾದೆ ಎನ್ನ ನೀ ಮಮತೆಯಿಂದಲಿ 2


ಅಟ್ಟಮೇಲೆ ಒಲೆ ನೆಟ್ಟಗುರಿವಂದದಿ ಕೆಟ್ಟ ಮೇಲೆಚ್ಚರ ಹುಟ್ಟಿತೆನಗೆ

ಮುಟ್ಟಿ ಭಜಿಪೆ ದಯವಿಟ್ಟು ಕಾಯೋ ಹನುಮೇಶವಿಠಲ

ನೀ ದಯದಿ 3

****