..
ಹಿಡಿಯೊರಂಗಯ್ಯ ಉಡುಗೊರೆಕೊಡುವೆವೊ ಕೃಷ್ಣಯ್ಯಭಿಡೆ ಬ್ಯಾಡೊ ಬೆತ್ತಲಿದ್ದಿಇದೇನು ಸಡಗರ ರಂಗಯ್ಯ ಪ.
ಶಾಲು ಜೋಡಿಯ ತಕ್ಕ ನೀಲ ದೊಡ್ಯಾಣನಿಟ್ಟುಮ್ಯಾಲೆ ಉಂಗುರವು ಮೊದಲಾಗಿಮ್ಯಾಲೆ ಉಂಗುರವು ಮೊದಲಾಗಿ ತಂದೆವಬಾಲ ಕೃಷ್ಣಯ್ಯನ ಜನಕಗೆ ಉಡುಗೊರೆ 1
ಗೌರಿ ಪಟಾವಳಿ ಮ್ಯಾಲೆ ಚೌರಿ ರಾಗಟೆ ಗೊಂಡೆಯ ಶೌರಿ ಕೃಷ್ಣಯ್ಯನ ಜನನಿಗೆಶೌರಿ ಕೃಷ್ಣಯ್ಯನ ಜನನಿ ದೇವಕಿಗೆಕುವರಿಯರು ಕೊಟ್ಟ ಉಡುಗೊರೆ2
ಹಲವು ಸೂರ್ಯರ ಬೆಳಕು ಗೆಲವೊ ಪಿತಾಂಬರ ಬೆಲೆಯಿಲ್ಲದಂಥ ಮುಕುಟವುಬೆಲೆಯಿಲ್ಲದಂಥ ಮುಕುಟ ಮುತ್ತಿನ ಹಾರ ಬಲರಾಮನಿಗೆ ಉಡುಗೊರೆ3
ಬಿಳಿ ಬಣ್ಣದ ಸೀರೆರನ್ನ ಮಾಣಿಕದಾಭರಣಹೊನ್ನೋಲೆ ಕೊಪ್ಪು ನಡುವಿಟ್ಟುಹೊನ್ನೋಲೆ ಕೊಪ್ಪು ನಡುವಿಟ್ಟು ತಂದೆವ ಕನ್ನೆ ರೇವತಿಗೆ ಉಡುಗೊರೆ 4
ಸಕಲಾತಿ ಸೀರೆ ದೋರೆ ಕಂಕಣ ಸರಿಗೆ ಹಾರ ಪದಕಗಳ ನಡುವಿಟ್ಟುಹಾರ ಪದಕಗಳ ನಡುವಿಟ್ಟು ರಾಮೇಶನನೂರು ಮಂದಿಗೆ ಉಡುಗೊರೆ 5
****