Showing posts with label ಜಯ ಜಯ ಸರಸ್ವತಿ ಜಯವರ mahipati. Show all posts
Showing posts with label ಜಯ ಜಯ ಸರಸ್ವತಿ ಜಯವರ mahipati. Show all posts

Wednesday, 11 December 2019

ಜಯ ಜಯ ಸರಸ್ವತಿ ಜಯವರ ankita mahipati

ಬಾಗೇಶ್ರೀ ರಾಗ , ಝಂಪೆತಾಳ 

ಜಯ ಜಯ ಸರಸ್ವತಿ
ಜಯವರ ಪೂರಣಮತಿ
ತ್ರಯಲೋಕ್ಯದಲಿ ಖ್ಯಾತಿ
ಜಯ ಸುಕೀರ್ತಿ ||ಪ||

ವಿದ್ಯಾವರದಾಯಿನೀ
ಸಿದ್ಧಿಗೆ ಶಿಖಾಮಣೀ
ಬುದ್ಧಿಪ್ರಕಾಶಿನೀ
ಸದ್ಭೂಷಿಣೀ ||೧||

ಕರಕಮಲದಲಿ ವೀಣೀ
ಸುರಸ ಅಮೃತವಾಣೀ
ವರವಿದ್ಯದಲಿ ದಾನೀ
ಸುಪ್ರವೀಣೀ ||೨||

ಪ್ರಸನ್ನ ವದನೀ
ವಿಶ್ವದಲಿ ನೀ ಪೂರ್ಣೀ
ಹಂಸವಾಹಿನೀ ಪೂರ್ಣಿ
ಸ್ವಸಿದ್ಧಿಣೀ ||೩||

ಸದಾಸದ್ಗುರು ಸ್ತುತಿ
ಒದಗುಹಾಂಗ ಸ್ಫೂರ್ತಿ
ಇದೇ ಮಹಿಪತಿ ಕೃತಿ
ಬೋಧಿಸು ಮತಿ ||೪||
****

ಕಾಖಂಡಕಿ ಶ್ರೀ ಮಹಿಪತಿರಾಯರು

ಜಯ ಜಯ ಸ್ವರಸತಿ ಜಯವರ ಪೂರಣಮತಿ ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ ಪ  


ವಿದ್ಯಾವರದಾಯಿನಿ ಸಿದ್ಧಿಗೆ ಶಿಖಾಮಣಿ ಬುದ್ಧಿ ಪ್ರಕಾಶಿನಿ ಸದ್ಭೂಷಿಣಿ 1 

ಕರಕಮಲದಲಿ ವೀಣೆ ಸುರಸ ಅಮೃತವಾಣಿ ವರವಿದ್ಯದಲಿ ದಾನಿ ಸುಪ್ರವೀಣೆ 2 

ಪ್ರಸನ್ನವದನಿ ವಿಶ್ವದಲಿ ನೀ ಪೂರ್ಣೆ ಹಂಸವಾಹಿನಿ ಪೂರ್ಣಿ ಸ್ವಸಿದ್ಧಿಣಿ 3 

ಸದಾ ಸದ್ಗುರುಸ್ತುತಿ ಒದುಗುವ್ಹಾಂಗ ಸ್ಫೂರ್ತಿ ಇದೇ ಮಹಿಪತಿ ಕುರ್ತಿ ಬೋಧಿಸುವ ಮತಿ4

****