Audio by Mrs. Nandini Sripad
ಶ್ರೀ ವೇಂಕಟೇಶ ಸ್ತೋತ್ರ ಸುಳಾದಿ
ರಾಗ ಆರಭಿ
ಝಂಪೆತಾಳ
ಎಸವೊ ಪೊಸರತುನ ರಂಜಿಸುವ ಮಕುಟ ಮೌಳಿ
ಅಸಿತ ಸುಳಿಗುರುಳು ಶೋಭಿಸುತಿರೆ ಮಧುಪನಂತೆ
ನೊಸಲಲ್ಲಿ ಮೃಗನಾಭಿ ತಿಲುಕ ತಿದ್ದಿದ ಸೊಬಗು
ದಶ ಕಕುಭಕಾಂತಿ ಧಿಕ್ಕರಿಸುವ ಕುಂಡಲ ಛವಿ
ಎಸಳು ಕಂಗಳು ಕುಸುಮಾಚಂಪಕನಾಸನ ಕಂಡೆ
ಶಶಿವದನ ನಸುನಗೆ ರಸಸುರಿವ ಮಾತು
ಮಿಸುಣಿಪಾ ವಳಿದಂತ ಕಂಬುಕೊರಳ ರೇಖೆ
ಹಸನಾದ ಉರನಾಭಿ ನಡಿವೆ ಸರ್ವಲೋಕ
ಬಸುರೊಳಗೆ ಒಪ್ಪುತಿರೆ ಕಂಡೆ ಕಟಿಕರ ಯುಗ್ಮಾ
ಪಸರಿಸೂವ ಊರು ಜಾನುಜಂಘೆ ಪದನಖಾ
ನಿಶಿಚರನಾಶಾ ಲೋಕಾತ್ರಯಾಶ್ರಯಾ ನಾಮಾ
ಝಷಕೇತನಯ್ಯಾ ಸಿರಿ ವಿಜಯವಿಠಲ ನ
ಅಸಮಸ ಮೂರ್ತಿಯಾ ಕನಸಿನಲ್ಲಿ ಕಂಡೆ ॥ 1 ॥
ಮಟ್ಟತಾಳ
ವೀರ ಮುದ್ರಿಕೆ ಬೆರಳ ಚಾರು ಶೋಭಿತ ಪೆಂಡೆ
ಭೋರಗರವ ಗೆಜ್ಜೆ ತಿರಿತಿರಿಲಿ ಝೇಂ -
ಕಾರದ ನೂಪೂರ ಶೃಂಗಾರದ ಉಡುದಾರ ಹೀರ ಕೌಸ್ತುಭ ತುಲಸೀ ಹಾರಾ ಪುಲಿಯುಗರು
ಹೇರೂರಾದಲ್ಲಿ ಕೇಯೂರ ಸಿರಿದೇವಿ
ವಾರಣದಿಂದ ಬಂಗಾರ ಕಂಕಣ ಮುದ್ರೆ
ತೋರುವ ಸರ್ವಾಲಂಕಾರ ಚಲುವನಾ
ಪಾರಾ ನೋಡಿದೆ ನಖಾ ಶಿರಸ ಪರಿಯಂತಾ
ಪಾರ ಮಹಿಮಾ ಸಮೀರಣ ನಾಮಕನು ವಿಜಯವಿಠಲನ್ನಾ
ಪಾರನ ನೋಡಿದೆ ಸಂಸಾರ ಹರವಾಗಿ
ಸೇರುವೆ ಗತಿಯಲ್ಲಿ ಆರಾಧನೆಯಿಂದ ॥ 2 ॥
ತ್ರಿವಿಡಿತಾಳ
ಪೊಂಬಟ್ಟೆ ವಸನವ ನಂದ ಮಹಿಮನ ಕೈಯ್ಯ
ಕೊಂಬು ಕೊಳಲು ಕೋಲು ತುತ್ತುರಿ ಮವ್ವುರಿ
ಭೊಂ ಭೊಂ ಭೋಂ ಎಂದು ಧ್ವನಿಮಾಡಿ ಊದುವ ರತ್ನ -
ಗಂಬಳಿ ಕೊಪ್ಪಿಲಿ ತ್ರಿಭಂಗಿಯನ್ನು ಹೂಡಿ
ತುಂಬಿದ ಗೋವಿಂಡಿನೊಳು ನಿಂದು ನಲಿದೊಲಿದು
ರಂಭೆರಾಮನೆ ಕಾಲಾರಂಭಾ ತೊರವಾ ಪೆಚ್ಚಿಸಿ
ಹಂಬಾಲಾಗೊಳಿಸಿದ ಗಂಭೀರ ಪುರುಷ ಕು -
ಟುಂಬ ಪಾಲಕ ವಿಶ್ವನೆಂಬೋದು ಶತಸಿದ್ಧ
ನಂಬಲು ಬೆಂಬಲವಾಗಿ ಪಾಲಿಪ ಪ್ರತಿ -
ಬಿಂಬ ಹೇಮಾಂಗ ಶ್ರೀ ವಿಜಯವಿಠಲರೇಯಾ ॥ 3 ॥
ಅಟ್ಟತಾಳ
ಗಿರಿಯ ಧರಿಸಿ ನಿರ್ಜರರ ಪೊರದಾ ನೀತ
ಗಿರಿಜೇಶಗೆ ಬಂದ ಉರಿಯ ಕಳೆದ ನೀತ
ಗಿರಿಯ ಬೆರಳಲೆತ್ತಿ ತುರುವ ಕಾಯಿದವನೀತ
ಗಿರಿಯ ವೈರಿಯ ನಂದನನ ಪ್ರೀತನೀತ
ಗಿರಿಯ ತಂದವಗತಿ ಕರುಣ ಮಾಡಿದ ನೀತ
ಗಿರಿಯ ಬಾಯಲಿಕಟ್ಟಿ ಜಗವ ಸಾಕುವನೀತ
ಗಿರಿಯ ಸುತ್ತುವನ ಪೆಸರೊಳೊಬ್ಬಾ ನೀತ
ಗಿರಿ ಪಾಶಾಶಾಯಿ ಶ್ರೀ ವಿಜಯವಿಠಲ ನೀತ
ಗಿರಿಯಾ ಕಿತ್ತಿದವ ನಳಿದನಂದ ಧೀರ ನೀತ ॥ 4 ॥
ಆದಿತಾಳ
ಶ್ಯಾಮವರ್ನ ಕೋಮಲಾಂಗ ಸಾಮಗಾಯನ ವಿಲೋಲ
ಕಾಮ ಪರಿಪೂರ್ಣ ತಿರ್ಮಲಾ ಮೇಲಗಿರಿನಿಲಯ
ರಾಮರಂಗ ರಾಜೀವಾಕ್ಷಾ ವಾಮನಾ ಇಂದಿರಾ ಪ್ರಾಣ
ಪ್ರೇಮಾ ಯದುಕುಲ ಲಲಾಮ ಭಕ್ತವಾರ್ಧಿಸೋಮ
ಭೂಮಿ ವಾಯು ತೇಜಾ ರಾಪೂ ಯೋಮಂತ ಬಾಹ್ಯದಿಪ್ಪ
ನೇಮಕನು ನ್ಯಾಮಕ ನೀಯಾಮಕನು ಗುಣಕರ್ಮಾ
ನಾಮಕನ ನೆನಿಯೆ ತ್ರಿಧಾಮಾದಲಿ ಸೇರಿಸುವ
ಭೀಮಾ ನಾಮಾ ದಾತಾ ನೀತಾ ವಿಜಯವಿಠಲ ಲೋಕ
ಸ್ವಾಮಿಯನ್ನು ಕಂಡೆ ಕಂಗಳ ಮನೋಹರವಾಯಿತು ॥ 5 ॥
ಜತೆ
ಪಾವಿತ್ರ ನಾನಾದೇ ಪರಮಪುರುಷನ ನೋಡಿ
ಪಾವಿತ್ರನಾಮಕ ವಿಜಯವಿಠಲ ರೇಯಾ ॥
***********