Showing posts with label ನಿರ್ಜರ ಸಾರ್ವ ಭೌಮಾ ದನುಜಕುಲ jagannatha vittala. Show all posts
Showing posts with label ನಿರ್ಜರ ಸಾರ್ವ ಭೌಮಾ ದನುಜಕುಲ jagannatha vittala. Show all posts

Saturday, 14 December 2019

ನಿರ್ಜರ ಸಾರ್ವ ಭೌಮಾ ದನುಜಕುಲ ankita jagannatha vittala

ಜಗನ್ನಾಥದಾಸರು
ನಿರ್ಜರ ಸಾರ್ವ
ಭೌಮಾ ದನುಜಕುಲಭೀಮಾ ಭೀಮಾ ರಘು ಸದ್ವಂಶದೊಳು
ದ್ದಾಮಾ ಕಾದುಕೋ ನಿನ್ನ ಭಕ್ತ
ಸ್ತೋಮ ಮಂಗಳನಾಮ ಹನುಮ
ತ್ಪ್ರೇಮಾತಮ ಸೀತಾ ಮನೋಭಿರಾಮ ಪ

ಸರಸಿಜೋದ್ಭವನ ಮಂದಿರದೊಳರ್ಚನೆಗೊಂಡು
ನಿರುತಾ ಪಾವನತರ ಚರಿತಾ
ಸರ್ವದೇವರ ದೇವ ಇಷ್ಟಾಕರ ರಸನ್ವಯ ನೃ
ಪರಕರವಾರಿರುಹ ಪೂಜಿತನಾಗಿ ದಶರಥಾ
ನರಸಿ ಜಠರದಿ ಜನಿಸಿ ಮೆರೆದಿಹ ರಾಮಾ 1

ಗಾಧಿನಂದನನ ಸುಮೇಧಾ ರಕ್ಷಿಸಿದಾ
ಗಾಧನಂದ ಬಲಬೋಧಾ
ಮೇದಿನಿ ಜಾತಳನೊಲಿಸಲು
ನೀಲ ಪ
ಯೋಧರ ಶಾಮಲ ಸುಮನಸ ವಿ
ರೋಧಿ ಲೋಕಮಯ ಸದೆದ ರಘುರಾಮಾ 2

ಚತುರವಿಂಶತಿ ದಶಶತ ಸಹಸ್ರ
ಜಿತಾದ್ಯಮಿತಾ ಆದ್ಯಮಿತ ರೂಪ ಜಗನ್ನಮಿತಾ
ಅತುಳ ಭುಜಬಲ ರಾವಣನ ಸಂ
ತತಿ ಸವರಿ ಲಂಕಾಧಿಪತ್ಯ
ನತ ವಿಭೀಷಣಗಿತ್ತಾ ವರದೇಂದ್ರ
ಯತಿ ವರದ ಜಗನ್ನಾಥ ವಿಠ್ಠಲ ರಾಮಾ 3
*******