Showing posts with label ಬರಿದೆ ಬಯಸದಿರಿ ಇಹಲೋಕಸುಖವೆಂಬ purandara vittala. Show all posts
Showing posts with label ಬರಿದೆ ಬಯಸದಿರಿ ಇಹಲೋಕಸುಖವೆಂಬ purandara vittala. Show all posts

Friday, 6 December 2019

ಬರಿದೆ ಬಯಸದಿರಿ ಇಹಲೋಕಸುಖವೆಂಬ purandara vittala

ಪುರಂದರದಾಸರು
ರಾಗ ಕಾಂಭೋಜ ಆದಿ ತಾಳ

ಬರಿದೆ ನೀ ಬಯಸದಿರಿಹಲೋಕಸುಖವೆಂಬೊ , ಅರಗಿನ ಪಾಯಸವ
ಕರಣಶುದ್ಧದಿ ಗಳಿಸು ಪರಲೋಕಸುಖವೆಂಬ , ಶ್ಯಾವಿಗೆ ಪಾಯಸವ , ಹೇ ಮನವೆ ||ಅ||

ಮುಂದುವರಿಯದೆ ಬಾಳ್ವ ಮೂಢ ನೃಪನ ಸೇವೆ, ಮುಗ್ಗುರಾಗಿಯ ಹಿಟ್ಟು
ಮಂದಮತಿಗಳೊಳು ಸ್ನೇಹವ ಮಾಡಲು, ನೀ ಪೋಗುವೆ ಕೆಟ್ಟು
ಒಂದಿನ ಬಿಡದೆ ಸತ್ಕಥಾಶ್ರವಣವೆಂಬ, ಪಾಥೇಯವ ಕಟ್ಟು
ಸಂದೇಹವಿಲ್ಲದೆ ದೊಡ್ಡ ಮಾರ್ಗದಲಿ ಮು-ಕುಂದನಂಘ್ರಿಯ ಕಟ್ಟು ಹೇ ಮನವೆ ||

ಅಗ್ಗದಾಸೆಗೆ ಸಂಗ್ರಹಿಸಬೇಡಘವೆಂಬ, ಅಡಿಗಂಟು ದವಸವನು
ನುಗ್ಗಲೊತ್ತಿ ಕಾಮಾದಿಗಳನು ಸಂಪಾದಿಸು, ಸತ್ಕರ್ಮವೆಂಬುದನು
ಯೋಗ್ಯರಡಿಗೆ ಶುದ್ಧಮನದಿಂದ ಕಾರ್ಮುಕ-ದಂದದಲಿ ಶಿರವನು
ಬಗ್ಗಿ ನಡೆದು ಪರಿಹರಿಸಿ ಕಾಡುವ, ಸಂಸಾರ ಭಂಗವನು, ಹೇ ಮನವೆ ||

ಸಕ್ಕರೆ ಘೃತ ಪಾಲಿನಿಂದತಿಶಯ ರುಚಿಯೆಂ-ದೆಸೆವೀ ಹರಿಕಥೆಯ
ಚೊಕ್ಕ ಬುದ್ಧಿಯಿಂದ ಸಂಪಾದಿಸುತಿರು, ಅಲ್ಪರ ಸಂಗತಿಯ
ಸೊಕ್ಕೊಳಿತಲ್ಲ ಕೇಳೆಲೋ ಮದಡಾತ್ಮನೆ, ಸ್ವಾಮಿ ಸೇವಕ ಸ್ಥಿತಿಯ
ಘಕ್ಕನರಿತು ಸೇರು ಪುರಂದರವಿಠಲನ್ನ, ಚರಣಕಮಲದ್ಯುತಿಯ, ಹೇ ಮನವೆ ||
***

pallavi

baride nI bayasadiriha lOka sukhavembo aragina pAyasava karaNa shuddhadi gaLisu paralOka sukhavembo shyAvige pAyasava hE manave

caraNam 1

munduvariyade bALva mUDha nrpana sEve muggurAgiya hiTTu
manda matigaLoLu snEhava mADalu nI pOguve keTTu
ondina biDade satkathA shravaNavemba bAdhEyava kaTTu
sandEhavillade doDDa mArgadali mukundanaghriya kaTTu hE manave

caraNam 2

aggadAsage sangrahisa bEDaghavemba aDigaNTu davasavanu
nuggalotti kAmAdigaLanu sampAdisu satkarmavembudanu
yOgyaraDige shuddha manadinda kArmukadandadali shiravanu
baggi naDedu pariharisi kADuva samsAra bhangavanu hE manave

caraNam 3

sakkare ghrta pAlinindatishaya ruciyendesevI harikatheya
cokka buddhiyinda sampAdisu tore alpara sangatiya
sokkoLitalla kEelO madaDAtmane svAmi sEvaka sthitiya
ghakkanaridu sEru purandara viTTalanna caraNa kamala dyutiya hE manave
***

ಬರಿದೆ ಬಯಸದಿರಿ ಇಹಲೋಕಸುಖವೆಂಬ ಬರಗಿನ ಪಾಯಸವ |ಶರಿಧಿಶಯನನ ಬೇಡೊ ಪ

ರಲೋಕಸುಖವೆಂಬಸೇವಗೆ ಪಾಯಸವ ಪ.ಮುಂದರಿಯದೆ ಮಾಳ್ಪ ಮೂಢನೃಪನ ಸೇವೆ ಮುಗ್ಗುರಾಗಿಯ ಹಿಟ್ಟು |ಮಂದಮತಿಯೆ ನೀನನ್ಯರಲಿ ಬಯಸುವ ನೀಚಮಾರ್ಗವ ಬಿಟ್ಟು ||ಕಂದರ್ಪಜನಕನ ಕಿಂಕರನೆಂಬುವ ಕಲಸೋಗರ ಕಟ್ಟು |ಸಂದೇಹಿಸದೆಪರಾತ್ಪರವಸ್ತು ಮುಕುಂದನಂಘ್ರಿಯ ತಟ್ಟು1

ಅಗ್ಗದಾಸೆಗೆ ಸಂಗ್ರಹಿಸದಿರಘವೆಂಬ ಅಡಿಗಂಟು ದವಸವನು |ಬಗ್ಗನುಳಿದು ಸಂಪಾದಿಸು ಪರವೆಂಬ ಪುಣ್ಯದ ದವಸವನು ||ಯೋಗ್ಯರನರಿಯದೆ ಏತಕೆ ಬೇಡುವೆ ಸಾಕಾರ ಕೇಶವನು |ಕುಗ್ಗಗೊಡದೆ ಸಂಸಾರವೆಂತೆಂಬುವ ಕೋಟಲೆ ತಪ್ಪಿಸುವನು 2

ಸಕ್ಕರಿ ಚಿಲಿಪಾಲು ಘ್ರತ ರಾಜಾನ್ನಕೆ ಸವಿಯೀವಹರಿಕಥೆಯ - ಬಿಟ್ಟು |ಅಕ್ಕರೆಯಿಂದಪೇಕ್ಷಿಸುವರೆ ನೀ ಅಲ್ಪರ ಸಂಗತಿಯ ||ಸೊಕ್ಕೊಳಿತಲ್ಲೆಲೊ ಮದಡು ಜೀವಾತ್ಮನೆ ಸ್ವಾಮಿಕಾರ್ಯಸ್ಥಿತಿಯ |ಗಕ್ಕನಂತು ಸೇರು ಪುರಂದರವಿಠಲನ ಚರಣಕಮಲದ್ವಿತಯ 3
*********