Showing posts with label ರಾಮ ಗೋವಿಂದ ಹರಿ ಕೃಷ್ಣ ಗೋವಿಂದ krishnavittala. Show all posts
Showing posts with label ರಾಮ ಗೋವಿಂದ ಹರಿ ಕೃಷ್ಣ ಗೋವಿಂದ krishnavittala. Show all posts

Monday, 2 August 2021

ರಾಮ ಗೋವಿಂದ ಹರಿ ಕೃಷ್ಣ ಗೋವಿಂದ ankita krishnavittala

ರಾಮ ಗೋವಿಂದ ಹರಿ ಕೃಷ್ಣ ಗೋವಿಂದ

ಕೃಷ್ಣ ಗೋವಿಂದ ಹರಿ ರಾಮ ಗೊವಿಂದ ಪ


ರಾಮ ರಾಮ ಕೃಷ್ಣಕೃಷ್ಣ _ ಕೃಷ್ಣಕೃಷ್ಣ ರಾಮರಾಮ

ರಾಮ ಕೃಷ್ಣ ರಾಮರಾಮ _ ಕೃಷ್ಣ ರಾಮ ಕೃಷ್ಣ ಕೃಷ್ಣ ಅ.ಪ.

ಮತ್ಸ್ಯಕೂರ್ಮ ಭೂವರಾಹ _ ಜೈ ಜೈ ವಾಮನ

ನಾರಸಿಂಹ ತ್ರಿವಿಕ್ರಮ _ ಶರಣು ಉಪೇಂದ್ರ 1

ಶ್ರೀಶ ವಿಷ್ಣು ಬುದ್ಧ ಕಲ್ಕಿ _ ಭೃಗುಜ ಜಯೇಶ

ವಾಸುದೇವ ಹೃಷಿಕೇಶ _ ಕೇಶವಾಚ್ಯುತ 2

ಪದ್ಮನಾಭ ಅಧೋಕ್ಷಜ _ ಅನಿರುದ್ಧ ಶ್ರೀಧರ

ವೇದವ್ಯಾಸ ಕಪಿಲದತ್ತ _ ಮಧುಸೂದನ 3

ವಿಶ್ವ ತೈಜಸ ಪ್ರಾಜ್ಞತುರ್ಯ-ಬ್ರಹ್ಮ ಧಾಮ

ಪೃಶ್ನಿಗರ್ಭ ಮಹಿದಾಸ _ ಪುರುಷೋತ್ತಮ 4

ಅಜಪರಶ್ರೀನಿವಾಸ _ ಸಾಸಿರಾನಂತ

ವಾಜಿವದನ ಶಿಂಶುಮಾರ _ ಸಚ್ಚಿದಾನಂದ 5

ನಾರಾಯಣ ಜನಾರ್ದನ _ ಹಂಸ ಪ್ರದ್ಯುಮ್ನ

ದಾಮೋದರ ಯಜ್ಞ ಋಷಭ _ ದೇವ ಮಾಧವ 6

ಅಪ್ಪ ಉರಗಾದ್ರಿ ವಾಸ _ ವೆಂಕಟೇಶ

ಅಪ್ರಮೇಯ ರಂಗನಾಥ _ ಪಾಂಡುರಂಗ 7

ಸತ್ಯವ್ಯಕ್ತ ಸತ್ಯನೇತ್ರ _ ಸತ್ಯಪರ ಭಿನ್ನ

ನಿತ್ಯತೃಪ್ತ _ ಸತ್ತದಾತ _ ಪುರುಷ ಮಹಾಂತ 8

ಲಕ್ಷ್ಮೀರಮಣ ಕೃಷ್ಣವಿಠಲ _ ಮುಕ್ತರಾಶ್ರಯ

ಲಕ್ಷ್ಯಮಾಡೆ ಮುಕ್ತಿ ಕೊಡುವ _ ಭಕ್ತವತ್ಸಲ9

****