Showing posts with label ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ ಸಾನು ರಾಗದಿ ಹರಿಯ ಸೇವಿಸುತಲಿರುವಿ ramavallabha vittala. Show all posts
Showing posts with label ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ ಸಾನು ರಾಗದಿ ಹರಿಯ ಸೇವಿಸುತಲಿರುವಿ ramavallabha vittala. Show all posts

Friday, 6 August 2021

ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ ಸಾನು ರಾಗದಿ ಹರಿಯ ಸೇವಿಸುತಲಿರುವಿ ankita ramavallabha vittala

 ..

Kruti by ಸರಸಾಬಾಯಿ Sarasabai 


ಏನು ಭಾಗ್ಯವೋ ತಾಯೆ ಲಕುಮಿ ನಿನ್ನದೂ

ಸಾನು ರಾಗದಿ ಹರಿಯ ಸೇವಿಸುತಲಿರುವಿ ಪ.


ಕಂಕಣವು ನೀನಾಗಿ ಹರಿಗೆ ಭುಜಕೀರ್ತಿ ನೀನಾಗಿ

ಶಂಕುಚಕ್ರ ಗದಾ ಪದ್ಮ ನೀನಾಗಿ ಶಂಕೆ ಇಲ್ಲದೆ

ಕಿಂಕರಳು ನೀನಾಗಿ ಹರಿಸೇವೆಗೆ

ಪಂಕಜಾನಾಭನ್ನ ಸೇವಿಸುತಲಿರುವಿ 1


ಅಕ್ಷರಳು ನೀನಾಗಿ ಹರಿಯ ವಕ್ಷಸ್ಥಳವನೇ ಸೇರಿ

ಈ ಜುತ ಹರಿಯ ಪರಮ ಸಂತೋಷದಿಂದ

ಲಕ್ಷ ಕೋಟಿ ಕೋಟಿ ಬ್ರಹ್ಮಾಂಡರೂಪದಲ್ಲಿರುವ

ಪಕ್ಷಿವಾಹನನ ನೋಡಿ ವೆರಗಾಗುತಲಿರುವಿ 2


ರಾಮನಾ ಸತಿಯಾಗಿ ಪ್ರೇಮದಿಂದಲಿ ಈಗ

ಕಾಮನಯ್ಯನ ಕಾರುಣ್ಯದಿಂದ

ರಮಾವಲ್ಲಭವಿಠಲನ ತೊಡೆಯ ಮೇಲೆ ಕುಳಿತು

ಸ್ವಾಮಿಗೆ ಸತಿಯಾಗಿ ಸೇವಿಸುತಲಿರುವಿ 3

***