..
ರಂಗವಲಿದ ಗುರುರಾಯರ ನೀ ನೋಡೋ |
ಅಂತರಂಗದಿ ಪಾಡೋ
ಭಂಗ ಬಡಿಪ ದುರಿತಂಗಳ ಈಡ್ಯಾಡೋ
ಸತ್ ಸಂಗವ ಬೇಡೋ ಅ.ಪ
ಹಿಂದೆ ಮೂರೊಂದವತಾರ ಧರಿಸಿದಾತ
ಇದು ಹಿರಿಯರು ಮಾತ |
ಬಂದ ಮರಳಿ ಮಹೀತಳದಿ ಜಗನ್ನಾಥ
ದಾಸಾರ್ಯ ಪ್ರಖ್ಯಾತ ||
ತಂದೆ ನಮಗೆ ತಿಳಿ ಎಂದೆಂದಿಗು ಎಂದೆಂದಿಗು
ಈತ ಆನಂದ ಪ್ರದಾತ 1
ಬಣ್ಣಿಸಲೆನಗಿನ್ನೊಶವೆ ಇವರ ಚರಿಯ
ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯತಾನಾಗಿ ವಿಧೇಯ
ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ
ಪುಸಿಯಲ್ಲವೊ ಖರಿಯ 2
ದಾಸವರ್ಯರಾ ವಾಸಗೈದ ಸ್ಥಾನ
ಗಯಕಾಶಿ ಸಮಾನ
ಲೇಸು ಭಕ್ತಿಯಲಿ ಸೇವಿಸಲನುದಿನ ಕೊಡುವುದುಸುಜ್ಞಾನ
ಈ ಸನ್ಮಹಿಮರ ದೂಷಿಸುವನೆ ಶ್ವಾನ | ಯಾತಕೆ ಅನುಮಾನ 3
ನಿಗಮವಾಣಿಯ ಸಾರ ನಿರ್ಮಿಸಿರುವ ದೇಹಾಖ್ಯ ರಥವ
ಸೊಗಸಿಲಿಂದ ತಾನೇರಿ ನಗುತ ಬರುವ ಚತುರ್ದಿಕ್ಕಿಲಿ ಮೆರೆವ
ಮಿಗೆ ವಿರೋಧಿಸುವ ಪಾಪಿಗೆ ಪಲ್ಮುರಿವ ಪೊಗಳುವರಷತರಿವ 4
ಶಾಮಸುಂದರನ ಸುಕಥಾಮೃತಸಾರ | ರಚಿಸಿದ ಬಹುಚತುರ
ಪಾಮರ ಜನರ ಪ್ರೇಮದಿ ಉದ್ಧಾರ ಮಾಡಲು ಗಂಭೀರ
ಶ್ರೀಮಾನ್ ಮಾನವಿಕ್ಷೇತ್ರನೆ | ನಿಜಾಗಾರವೆಂದೆನಿಸಿದ ಧೀರ 5
***