Showing posts with label ಸುಜನರೆಲ್ಲರ ಪೊರೆಯುತ ಗಜಗಹ್ವರದಿ ನಿಂತ venkatanatha. Show all posts
Showing posts with label ಸುಜನರೆಲ್ಲರ ಪೊರೆಯುತ ಗಜಗಹ್ವರದಿ ನಿಂತ venkatanatha. Show all posts

Thursday, 1 July 2021

ಸುಜನರೆಲ್ಲರ ಪೊರೆಯುತ ಗಜಗಹ್ವರದಿ ನಿಂತ ankita venkatanatha

 written by ನಾಗರಾಜು ಹಾವೇರಿ.....

ಸುಜನರೆಲ್ಲರ ಪೊರೆಯುತ ।
ಗಜಗಹ್ವರದಿ ನಿಂತ ಮಹಾ । ಮಹಿ ।
ಮ ಜಯತೀರ್ಥರ್ಗೆ
ನಮೋ ನಮೋ ।। ಪಲ್ಲವಿ ।।

ನರನವತಾರನೇ ನಮೋ ನಮೋ ।
ಗುರು ಅಕ್ಷೋಭ್ಯರ ಕರಸಂಜಾತ
ನಮೋ ನಮಃ ।। ಚರಣ ।।

ತುಂಗಾ ತೀರಾ ವಾಸ
ನಮೋ ನಮೋ ।
ಮಂಗಳಾಂಗ ಕೃಷ್ಣ ಸಖನೇ
ನಮೋ ನಮಃ ।। ಚರಣ ।।

ಕೇಶವ ರುಕ್ಮಿಣಿ ಸುತನೇ
ನಮೋ ನಮೋ ।
ಷಷ್ಟಿಕ ವಂಶಜ ರಘುನಾಥ
ನಮೋ ನಮಃ ।। ಚರಣ ।।
ಗುರು ವಿದ್ಯಾಧಿರಾಜರ
ಪಿತನೆ ನಮೋ ನಮ ।
ಗುರು ರಾಜೇಂದ್ರ ಜಯಧ್ವಜರ
ಸಲುಹಿದವರ್ಗೆ
ನಮೋ ನಮಃ ।। ಚರಣ ।।

ಆಷಾಢ ಬಹುಳ ಪಂಚಮಿ ದಿನ ।
ಪರಮ ಪು ।
ರುಷ ಮೂಲರಾಮೋsಭಿನ್ನ -
ವೇಂಕಟನಾಥನ ಪದ ಸೇರಿದ
ಯತಿಗೆ ನಮೋ ನಮಃ ।। ಚರಣ ।।
****