Showing posts with label ಸ್ವಾಮಿ ಸೀತಾರಾಮ ಪತಿತ ಪಾವನ ನಾಮ mahipati. Show all posts
Showing posts with label ಸ್ವಾಮಿ ಸೀತಾರಾಮ ಪತಿತ ಪಾವನ ನಾಮ mahipati. Show all posts

Wednesday, 1 September 2021

ಸ್ವಾಮಿ ಸೀತಾರಾಮ ಪತಿತ ಪಾವನ ನಾಮ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸ್ವಾಮಿ ಸೀತಾರಾಮ ಪತಿತ ಪಾವನ ನಾಮ ಪ  


ಅಮಿತವಾದ ಗುಣ ನಿರ್ಮಳಾಚರಣಿ ಕಮಲಭವಾರ್ಚಿತ ಕಾರ್ಮುಕಪಾಣಿ ನೇಮದಿಂದಾಡುವ ಅಮೃತವಾಣಿ 1 

ಸಮಸ್ತ ಹೃದಯಾಂತ್ರ ವಿಮಲಸುಚರಿತ್ರ ಸುಮನ ಸುಗಾತ್ರ ಅಮರಜ ನೇತ್ರ ಸೋಮಶೇಖರಪ್ರಿಯ ಪುಣ್ಯಪವಿತ್ರ 2 

ಸಾಹ್ಯಸಹಕಾರ ಬಾಹ್ಯಾಂತ್ರ ಸ್ಥಿರ ಸ್ವಹಿತದಾಗರ ಮಹಿಪತಿ ಮನೋಹರ ಮಹಾಮಹಿಯನ್ನುಳ್ಳನಹುದೋ ಉದಾರ 3

***