Showing posts with label ಕಾಯೋ ಕಾಯೋ ಕರುಣಾಕರ ಗೋವಿಂದಾ mahipati. Show all posts
Showing posts with label ಕಾಯೋ ಕಾಯೋ ಕರುಣಾಕರ ಗೋವಿಂದಾ mahipati. Show all posts

Wednesday, 11 December 2019

ಕಾಯೋ ಕಾಯೋ ಕರುಣಾಕರ ಗೋವಿಂದಾ ankita mahipati

ಯಮನ್ ರಾಗ ತ್ರಿತಾಳ

ಕಾಯೋ ಕಾಯೋ ಕರುಣಾಕರ ಗೋವಿಂದಾ
ಕಾಯೋ ನಮ್ಮ ಕೃಪಾಸಿಂಧು ಹರಿ ಮುಕುಂದಾ ||ಪ||

ಬೊಮ್ಮನ ಪಡದಾ ಪರಾಪರ ಧೊರಿಯೇ
ಸಮ್ಯಕ್ ಜ್ಞಾನವನಿತ್ತು ಕಾಯೋ ಮುರಾರಿಯೆ
ನಿಮ್ಮ ವಿನಾ ಅನ್ಯ ಪಥವ ನಾನರಿಯೆ
ನಮ್ಮ ದೈವಾ ನೀನಹುದೋ ನರಹರಿಯೇ ||೧||

ಭವಭಯದಾ ದುರಿತಾ ಪರಿಹರಿಸೋ
ಭಾವಭಕ್ತ್ರಿಯೊಳು ಮನಾ ಪೂರ್ಣವಿರಿಸೋ
ಕಾವ ಕರುಣನೆ ನಿಮ್ಮ ದಯ ಬೀರಿಸೋ
ದಿವಾರಾತ್ರಿಯಲಿ ನಿಮ್ಮ ಸ್ಮರಣಿಲಿರಿಸೋ ||೨||

ಕಾಯೋ ಕಾಯೋ ಕೊಟ್ಟು ನಿಮ್ಮ ನಿಜ ಧ್ಯಾನವಾ
ಕಾಯೋ ಕರುಣಿಸಿ ಎನ್ನ ಜೀವನವಾ
ಕಾಯೋ ದಯದಿಂದ ಎನ್ನ ಅಭಿಮಾನವಾ
ಕಾಯೋ ನಿಜದಾಸ ಮಹಿಪತಿ ಪ್ರಾಣವಾ ||೩||
***

ಕಾಖಂಡಕಿ ಶ್ರೀ ಮಹಿಪತಿರಾಯರು

ಕಾಯೊ ಕಾಯೊ ಕರುಣಕಾರ ಗೋವಿಂದ ಕಾಯೊ ನಮ್ಮ ಕೃಪಾಸಿಂಧು ಹರಿ ಮುಕುಂದ ಪ 


ಬೊಮ್ಮನಾ ಪಡೆದ ಪರಾವರ ದೊರಿಯೆ ಸಮ್ಯಜ್ಞಾನವಿತ್ತು ಕಾಯೊ ಮುರಾರಿಯೆ ನಿಮ್ಮ ವಿನಾ ಅನ್ಯಪಥವ ನಾನರಿಯೆ ನಮ್ಮ ದೈವ ನೀನಹುದೊ ನರಹರಿಯೆ 1 

ದುರಿತ ಪರಿಹರಿಸೊ ಭಾವ ಭಕ್ತಿಯೊಳೂ ಮನಪೂರ್ಣವಿರಿಸೊ ಕಾವಕರುಣನೆ ನಿಮ್ಮ ದಯ ಬೀರಿಸೊ ದಿವಾರಾತ್ರೆಯಲಿ ನಿಮ್ಮ ಸ್ಮರಣಿಲಿರಿಸೊ 2 

ಕಾಯೊ ಕಾಯೊ ಕೊಟ್ಟು ನಿಮ್ಮ ನಿಜಧ್ಯಾನವ ಕಾಯೊ ಕರುಣಿಸಿ ಎನ್ನ ಜೀವನದ ಕಾಯೊ ದಯದಿಂದ ಎನ್ನ ಅಭಿಮಾನ ಕಾಯೊ ನಿಜ ದಾಸ ಮಹಿಪತಿ ಪ್ರಾಣವ 3

****