ರಾಗ ಶಂಕರಾಭರಣ ಅಟತಾಳ
ಜೋ ಜೋ ಜೋಜೋ ಜೋ ಸಾಧುವಂತ
ಜೋಜೋ ಜೋಜೋ ಜೋ ಭಾಗ್ಯವಂತ
ಜೋಜೋ ಜೋಜೋ ಜೋ ಗುಣವಂತ
ಜೋಜೋ ಜೋಜೋ ಜೋ ಲಕ್ಷ್ಮೀಕಾಂತ ||ಪ||
ಭಕ್ತವತ್ಸಲ ಭವಹರನೆ ಜೋಜೋ
ಕೃತ್ತಿವಾಸಪ್ರಿಯ ಕೃಷ್ಣನೆ ಜೋಜೋ
ಮುಕ್ತಿದಾಯಕ ಮುರಹರನೆ ಜೋಜೋ
ಚಿತ್ತಜನಯ್ಯ ಪರವಸ್ತುವೆ ಜೋಜೋ ||
ಕರುಣಾಕರ ಕರಿವರದನೆ ಜೋಜೋ
ಸುರನರ ಮುನಿವಂದಿತನೆ ಜೋಜೋ
ಗರುಡವಾಹನ ನಗಧರನೆ ಜೋಜೋ
ಖರದೂಷಣ ಸಂಹಾರನೆ ಜೋಜೋ ||
ವಾರಿಜಾಕ್ಷ ವಿಶ್ವಪಾಲನೆ ಜೋಜೋ
ವಾರಿಧಿಶಯನ ನರಹರಿಯೆ ಜೋಜೋ
ಘೋರದುರಿತ ಸಂಹಾರನೆ ಜೋಜೋ
ನಾರಾಯಣ ನರಹರಿಯೆ ಜೋಜೋ ||
ಮಂದರಧರ ಮಾಧವನೆ ಜೋಜೋ
ನಂದನ ಕಂದ ಮುಕುಂದನೆ ಜೋಜೋ
ಇಂದಿರೆಯರಸ ಗೋವಿಂದನೆ ಜೋಜೋ
ಸಿಂಧುಬಂಧನ ರಾಮಚಂದ್ರನೆ ಜೋಜೋ ||
ಚಕ್ರಧರ ಚತುರ್ಭುಜನೆ ಜೋಜೋ
ಶಕ್ರತನಯ ಸಖದೇವನೆ ಜೋಜೋ
ಅಕ್ರೂರವರದ ಅಜತಾತನೆ ಜೋಜೋ
ವರದ ಶ್ರೀಪುರಂದರವಿಠಲನೆ ಜೋಜೋ ||
**********
ಜೋ ಜೋ ಜೋಜೋ ಜೋ ಸಾಧುವಂತ
ಜೋಜೋ ಜೋಜೋ ಜೋ ಭಾಗ್ಯವಂತ
ಜೋಜೋ ಜೋಜೋ ಜೋ ಗುಣವಂತ
ಜೋಜೋ ಜೋಜೋ ಜೋ ಲಕ್ಷ್ಮೀಕಾಂತ ||ಪ||
ಭಕ್ತವತ್ಸಲ ಭವಹರನೆ ಜೋಜೋ
ಕೃತ್ತಿವಾಸಪ್ರಿಯ ಕೃಷ್ಣನೆ ಜೋಜೋ
ಮುಕ್ತಿದಾಯಕ ಮುರಹರನೆ ಜೋಜೋ
ಚಿತ್ತಜನಯ್ಯ ಪರವಸ್ತುವೆ ಜೋಜೋ ||
ಕರುಣಾಕರ ಕರಿವರದನೆ ಜೋಜೋ
ಸುರನರ ಮುನಿವಂದಿತನೆ ಜೋಜೋ
ಗರುಡವಾಹನ ನಗಧರನೆ ಜೋಜೋ
ಖರದೂಷಣ ಸಂಹಾರನೆ ಜೋಜೋ ||
ವಾರಿಜಾಕ್ಷ ವಿಶ್ವಪಾಲನೆ ಜೋಜೋ
ವಾರಿಧಿಶಯನ ನರಹರಿಯೆ ಜೋಜೋ
ಘೋರದುರಿತ ಸಂಹಾರನೆ ಜೋಜೋ
ನಾರಾಯಣ ನರಹರಿಯೆ ಜೋಜೋ ||
ಮಂದರಧರ ಮಾಧವನೆ ಜೋಜೋ
ನಂದನ ಕಂದ ಮುಕುಂದನೆ ಜೋಜೋ
ಇಂದಿರೆಯರಸ ಗೋವಿಂದನೆ ಜೋಜೋ
ಸಿಂಧುಬಂಧನ ರಾಮಚಂದ್ರನೆ ಜೋಜೋ ||
ಚಕ್ರಧರ ಚತುರ್ಭುಜನೆ ಜೋಜೋ
ಶಕ್ರತನಯ ಸಖದೇವನೆ ಜೋಜೋ
ಅಕ್ರೂರವರದ ಅಜತಾತನೆ ಜೋಜೋ
ವರದ ಶ್ರೀಪುರಂದರವಿಠಲನೆ ಜೋಜೋ ||
**********