Showing posts with label ನೆಲದಲ್ಲಿ ಪಸರಿಸಿದ ಪಾಲ hayavadana. Show all posts
Showing posts with label ನೆಲದಲ್ಲಿ ಪಸರಿಸಿದ ಪಾಲ hayavadana. Show all posts

Friday 13 December 2019

ನೆಲದಲ್ಲಿ ಪಸರಿಸಿದ ಪಾಲ ankita hayavadana

by ವಾದಿರಾಜ
ನೆಲದಲ್ಲಿ ಪಸರಿಸಿದ ಪಾಲಮೇಲೊರಗಿದ್ದಹಳೆಯ ಹಾವ ಕಂಡೆನದರಲದ್ಭುತವ ಕಂಡೆ ಪ.

ನಡುಗಡಿದ ಸಿಂಗಡಿಯ ಬಿಲ್ಲ ಕಂಡೆನದರಮೇ-ಲ್ಗಡೆಯಲಧೋಮುಖದ ತುಂಬಿಗಳ ಹಿಂಡ ಕಂಡೆಮಡುವೆರಡ ಕಡೆಯಲ್ಲಿ ಒಂದೊಂದು ಮಕರಿಯ ಕಂಡೆಕಡೆದ ಶಂಖ ಚತುರ್ವೇದಕೊದಗುವುದ ಕಂಡೆ 1

ಪದುಮದೆಸಳ್ಗಳಿಗೆ ಮೂರು ವಿಧದ ಬಣ್ಣವ ಕಂಡೆಮೃದುವಾದ ಕೂರ್ಮಗಳ ಬೆನ್ನಸೊಬಗ ಕಂಡೆಮಧುರ ಪವಳೊಳಗೆ ಪುಟ್ಟ ಕರಡಿಗೆಯ ಕಂಡೆಅಧೋಮುಖದ ಸಂಪಿಗೆಗೆರಡು ವಿವರವ ಕಂಡೆ 2

ನೇಲುತಿದ್ದ ಲತೆಗಳ ತುದಿಯ ಜಾಲವ ಕಂಡೆ ವಿ-ಶಾಲವಾದ ನೀಲಮಣಿಯ ಹಲಗೆಯಲಿ ಹೆಣ್ಣ ಕಂಡೆಏಳು ಲೋಕಗಳೊಳಗೆ ಪುಟ್ಟ ಕರಡಿಗೆಯ ಕಂಡೆಈ ಲೋಕವ ಮೋಹಿಸುವ ಮೂರು ಚಿನ್ನದಕೋಲಕಂಡೆ3

ಬಾವಿಯೊಳು ಪುಟ್ಟಿಕೊಂಡ ಸ್ಥೂಲ ಪದ್ಮವ ಕಂಡೆಭಾವಿಸೆ ಕರಿಯಿಲ್ಲದ ಕುಂಭಸ್ಥಳವ ಕಂಡೆಆವಾಗಳಿವಿಲ್ಲದಕದಳಿಕಂಬಗಳ ಕೆಳಗೆಈ ವಸುಧೆಯ ಮೋಹಿಸುವೆರಡು ಕನ್ನಡಿಗಳ ಕಂಡೆ 4

ಬೆಳೆದೆರಡು ಗಜದಂತಗಳ ಕಂಡೆ ನಳನಳಿಪನಳಿನಯುಗ್ಮವ ಕಂಡೆನದರೆಸಳುಗಳಲ್ಲಿತೊಳೆದ ಹತ್ತು ಮುತ್ತುಗಳ ಕಂಡೆ ಬೇಗದಲಿ ಶ್ರೀ-ಲಲನೆಯಾಳ್ದ ಹಯವದನನಾಳ್ಗಳೆ ಬಲ್ಲರೈಸೆ 5
*******