ಓಡ್ಯಾಡುತ ನೀ ಒಲಿದೊಲಿದು ಮನೆಗೆ ಬಾರೊ ಮುಕುಂದ
ನೋಡೆನ್ನನು ದಯಮಾಡದಿರುವುದೇನು ಚೆಂದ ಪ
ನೀಲವರ್ಣನೆ ನೀರಜಾಕ್ಷ ನಿನ್ನಪಾರ
ಗುಣವ ನಾ ಏನುವರ್ಣಿಸಲ್ಹೇಳೊ ಸಾಕ್ಷ
ಇಂದಿರಾಪತಿ ನಿನ್ನ ಆಕಾರ ನೋಡುವೆ-
ನೆಂದ್ಹುಟ್ಟಿತೆನಗೆ ಮಹಾಪೇಕ್ಷ 1
ಹಸ್ತಿ ವರದ ಕೇಳು ನಿನ್ನ ಚರಣಾಬ್ಜಗಳಿಗೆ ನಾ
ಮಸ್ತಕ ಬಾಗುವೆ ಮುನ್ನ ತಿಳಿ
ಭೃತ್ಯನೆಂದೆನ್ನ ಚಿತ್ತಕೆ ತಂದು ನೀ-
ನಾಗ ಬೇಕೆನಗೆ ಪ್ರಸನ್ನ 2
ಉಟ್ಟಾಂಬರನಿರಿಜರವು ಭೂಷಣ ಹೊಸ ಪರಿಯು
ವಕ್ಷಸ್ಥಳದಿ ನೋಡೋ ಸಿರಿಯು
ಇಟ್ಟಿರೋ ಬಾಪುರಿಯು ಶ್ರೇಷ್ಠ ಭೀಮೇಶ-
ಕೃಷ್ಣನೆ ಲೋಕನಾಳುವ ದೊರೆಯು 3
****