Showing posts with label ಶ್ರೀವಿಠಲ ಹೃಷಿಕೇಶನೆ ನತಜನಪೋಷ govinda. Show all posts
Showing posts with label ಶ್ರೀವಿಠಲ ಹೃಷಿಕೇಶನೆ ನತಜನಪೋಷ govinda. Show all posts

Monday, 18 November 2019

ಶ್ರೀವಿಠಲ ಹೃಷಿಕೇಶನೆ ನತಜನಪೋಷ ankita govinda

by ಗೋವಿಂದದಾಸ
ಶ್ರೀ ವಿಠಲ ಹೃಷಿಕೇಶನೆ ನತಜನಪೋಷ ವಾಸುಕೀಶಯನ ಪ

ವಾಸವನುತ ರಜಿತೇಶ ನಮಿತಪದಕ್ಲೇಶಹರಣ ಜಗದೀಶ ಜನಾರ್ದನಅ.ಪ

ನೀರೊಳಿಳಿದು ಮತ್ಸ್ಯಾವತಾರದಿಂದಲಿನಲಿದುಘೋರತಮನ ಗೆಲಿದುಚಾರುವೇದವ ತಂದೆ ಧೀರ ಕಮಠನಾದಿಕೇಸರಿಯಾಕಾರವನೇತಾಳಿಸಾರಿ ಕಂಬದಿ ಮೈದೋರುತ ತರಳಗೆಧೀರನ ಸೀಳಿದೆನಾರಮೃಗೇಶನೆ1

ಬಲಿಯೊಳ್ ದಾನವ ಬೇಡಿ ನೆಲನಈರಡಿಮಾಡಿಛಲದಿ ಬಂಧಿಸಿ ಬಲಿಯ ತಲೆಯ ಮೆಟ್ಟಿದೆ ವಾಮನಾಛಲದಭಾರ್ಗವರಾಮ ಧರಣಿಜೆಗೊಲಿದನೆರಘುರಾಮ ಕೊಳಲನುಡಿಸಿ ಗೋವುಗಳೊಡನಾಡಿದೆತ್ರಿಪುರನ ಸತಿಯರ ವ್ರತವ ಪರಿಹರಿಸಿದಕಪಟಮೋಹನರೂಪನಿಪುಣಾ ಬೌದ್ಧಾವತಾರಕಪಟದೀ ಹಯವೇರಿ ಬಂದಾ ನಿಪುಣಕಲ್ಕ್ಯಾವತಾರೀ ಗುಪಿತದಿ ಸರ್ವಾ ವ್ಯಾಪಕನೆನಿಸಿದೆಕಪಟನಾಟಕಗೋವಿಂದದಾಸನ ಪ್ರಿಯಾ3
******