Showing posts with label ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು tandevaradagopala vittala. Show all posts
Showing posts with label ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು tandevaradagopala vittala. Show all posts

Thursday, 5 August 2021

ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)

ಭೂತರಾಜರು


ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ ಪ


ಭಾವ ಶುದ್ಧದಿ ಓದಿ ಗ್ರಂಥಸಾರವಾ ವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ 1

ಅಷ್ಟ ಮಂದಿಯಾ ಅಮೃತವೃಷ್ಟಿಗರೆವರೂ ಶ್ರೀ ಕೃಷ್ಣಮಹಿಮೆಯ ತಾವು ಕೂಡಿ ಪಾಡೊರೊ2

ತಂದೆ ಎಂಬೊದೂ ತಾನು ಒಂದನರಿಯದೆ ನಿಂದೆ ಮಾಡಿ ತಾನೆ ಬಲುಕುಂದಿಗಳುಕುವಾ 3

ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂ ಸಿಟ್ಟಿನಿಂದ ಬೈದು ಬಹು ಕಷ್ಟಬಡುವನೊ 4

ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು ವ್ಯರ್ಥ ನೀನು ದಂಡಕಳುಕುವಿ 5

ಏನು ಪೇಳಲಿ ಇನ್ನೇನು ಹೇಳಲೀe್ಞÁನ ಶೂನ್ಯನಂತೆ ಶಿಕ್ಕಿ ನುಡಿಯ ಬ್ಯಾಡೆಲೋ 6

ಖುಲ್ಲ ಕೇಳೆಲೋ ಎಲೋ ಘಲ್ಲ ತೊಡದಿರೋನಿಗಮವೆಲ್ಲ ಪೇಳಿಸುವಾ ಕಲ್ಲಿನಿಂದಲೇ 7

ಶರಣು ಪೊಕ್ಕೆನೊ ಸ್ವಾಮಿ ಮರೆಯ ಪೊಕ್ಕೆನೊ ಕರುಣ ಮಾಡಿರೀ ಕಂಣು ತೆರೆದು ನೋಡಿರೀ 8

ಭೂತ ಹರಣವಾ ತಾಳೋ ಭೀತಿಗೊಳಿಸುತಾ ಪಾಪ ಪೋಪುದೂ ಯನ್ನ ಪಾದ ಸೋಂಕಲೂ9

ಭೀತಿಗೊಳಿಸುತಾನೇಕ ಭೂತ ಪ್ರೇತಕೇರಾಜನಾಗಿ ನೀನು ಭೂತ ಪ್ರೇತ ಗಣದೊಳು 10

ನಂದಿವಾಹನಾಪದಕೆ ಮುಂದೆ ಬಾಹುವೀ ಯನ್ನ ಕಂದ ನೀನು ನಾನೇ ಭಾವಿ ಮಂದಜಾಸನಾ 11

ಪಂಚವೃಂದದೀ ಸದ್ವøಂದ ಪೂಜ್ಯನಾ ದ್ವಂದ್ವ ಪೊಂದಿ ತಾನು ಸ್ವಾನಂದ ಪಡೆದನೂ 12

ಸ್ವಾದಿನಿಲಯನಾ ಬಲು ಪ್ರೀತಿ ಪಡೆದು ತಾ ತ್ರಿಶೂಲ ಧರಿಸಿದಾ ಭಾವಿ ಶೂಲ ರಮಣನೂ 13

ಪ್ರಾಣ ಪತಿಯನಾ ರೇಣು ಪಾದ ಫಣಿಯಲೀ ಪ್ರಾಣಿನಿಡದನಾ ಅವನ ಪ್ರಾಣ ಸೆಳೆವನಾ14

ಎಂತು ಪೇಳಲೀ ಇವರ ಅಚಿಂತ್ಯಮಹಿಮೆಯಾ ಶಾಂತಮೂರುತಿ ಶಶಿಕಾಂತ ಕೀರುತೀ15

ದೂಷಜನರನಾ ಬಲು ಘಾಸಿಗೊಳಿಸಿದಾ ಶಕ್ತಿದಾಯಕ ತಂದೆವರದಗೋಪಾಲವಿಠಲನು 16

***