Showing posts with label ನಾರಾಯಣನೆಂಬ ನಾಮವ ನೇಮದಿ purandara vittala. Show all posts
Showing posts with label ನಾರಾಯಣನೆಂಬ ನಾಮವ ನೇಮದಿ purandara vittala. Show all posts

Thursday, 5 December 2019

ನಾರಾಯಣನೆಂಬ ನಾಮವ ನೇಮದಿ purandara vittala

ಪುರಂದರದಾಸರು
ರಾಗ ಸೌರಾಷ್ಟ್ರ. ಅಟ ತಾಳ 

ನಾರಾಯಣನೆಂಬ ನಾಮವ ನೇಮದಿ ನೆನೆವುತಿರೆಚ್ಚರಿಕೆ||ಪ||
ನೀರ ಮೇಲಿನ ಗುಳ್ಳೆ ನರರೆಂಬ ಡಿಂಭವ ನಂಬದಿರೆಚ್ಚರಿಕೆ ||ಅ||

ಪರರು ಮಾಡಿದ ಪಾತಕಗಳುಚ್ಚರಿಸದೆ ನಾಲಿಗೆಗೆಚ್ಚರಿಕೆ
ಗುರು ಹರಿಯರ ಸೇವೆ ಮಾಡದೆ ಉದರವ ಪೊರೆಯದಿರೆಚ್ಚರಿಕೆ
ಹರಿದಿನದುಪವಾಸ ಇರುಳು ಜಾಗರವ ನೀ ಮರೆಯದಿರೆಚ್ಚರಿಕೆ
ನರಹರಿಯಂಘ್ರಿಯ ಸ್ಮರಿಸದೆ ನರಸ್ತುತಿ ತರವಲ್ಲ ಎಚ್ಚರಿಕೆ ||

ಹೀನ ಮಾನಿನಿಯರ ಧ್ಯಾನ ಕಾನನದೊಳಗಿಳಿಯದಿರೆಚ್ಚರಿಕೆ
ನಾನೆಂಬೊ ಅಹಂಕಾರ ಮಾಡಿ ನರಕದೊಳು ನರಳದಿರೆಚ್ಚರಿಕೆ
ಜಾಹ್ನವಿ ಸ್ನಾನ ಸಂಧ್ಯಾನುಷ್ಠಾನ ಸುಜ್ಞಾನಕೇಳೆಚ್ಚರಿಕೆ
ಜಾನಕೀರಮಣನ ಧ್ಯಾನವೆ ಧರ್ಮಸಂತಾನ ಮುಂದೆಚ್ಚರಿಕೆ ||

ಮಡದಿಮಕ್ಕಳೆಂಬೊ ಕಡುಮೋಹಕ್ಕೆ ಸಿಲುಕಿ ಕೆಡಬೇಡೆಚ್ಚರಿಕೆ
ನಡೆವಾಗ ನುಡಿವಾಗ ಗಿಡವೆಲ್ಲ ನೆಂಟರು ಕಡೆಗಿಲ್ಲ ಎಚ್ಚರಿಕೆ
ಕೊಡುಗಯ್ಯ ಮಾಡದೆ ಮಡಗಿದ ಧನ ಸಂಗಡ ಬಾರದೆಚ್ಚರಿಕೆ
ದೃಢಭಕ್ತಿಯಿಂದಲಿ ಪುರಂದರವಿಠಲನ್ನ ನೆರೆನಂಬು ಎಚ್ಚರಿಕೆ ||
***

pallavi

nArAyaNanemba nAmava nEmadi nenevutireccarike

anupallavi

nIra mElina guLLa nararemba Dambava nambadiraccarike

caraNam 1

pararu mADida pAdakagaLuccarisade nAligegeccarike
guru hariyara sEve mADade udarava poreydireccarike
haridinadupavAsa iruLu jAgarava nI mareyatireccarike
narahariyanghriya smarisade nara stuti taravalla eccarike

caraNam 2

hIna mAniniyara dhyAna doLagiLiyadireccarike
nAnembo ahankAra mADi narakadoLu naraLadireccarike
jAhnavi snAna sandhyAnuSThAna su-jnAna kELeccarike
jAnakI ramaNana dhyAnave dharma santAna mundeccarike

caraNam 3

maDadi makkaLembo kaDu mOhakke siluki keDa bEdeccarike
naDevAga nuDivAga giDavella neNTaru kaDegilla eccarike
koDugayya mADade maDagida dhana sankaDa bAradeccarike
drDha bhaktiyindali purandara viTTalanna nere nambu eccarike
***


ನಾರಾಯಣನೆಂಬ ನಾಮವ ನೇಮದಿ ನೆನೆಯುತಿರೆಚ್ಚರಿಕೆ |
ನೀರ ಮೇಲಿನ ಗುಳ್ಳೆ ನಡೆಯೆಂಬ ಡಿಂಭವ ನಂಬದಿರೆಚ್ಚರಿಕೆ ಪ.

ಪರರು ಮಾಡಿದ ಪಾತಕವ ನಾಲಿಗೆಯೊಳುಚ್ಚರಿಸದಿರೆಚ್ಚರಿಕೆಗುರು ಹಿರಿಯರ ಸೇವೆ ಮಾಡದೆ ಉದರವ ಪೊರೆಯದಿರೆಚ್ಚರಿಕೆ ||ಹರಿದಿನದುಪವಾಸ ಇರುಳ ಜಾಗರವ ನೀ ಮರೆಯದಿರೆಚ್ಚರಿಕೆನರಹರಿಯಂಘ್ರಿಯ ಸ್ಮರಿಸದೆ ನರಸ್ತುತಿ ತರವಲ್ಲ ಎಚ್ಚರಿಕೆ 1

ಹೀನ ಮಾನನಿಯರ ಧ್ಯಾನಕಾನನದೊಳಿಳಿಯದಿರೆಚ್ಚರಿಕೆನಾನೆಂಬ ಅಹಂಕಾರ ಮಾಡಿ ನರಕದೊಳು ನರಳದಿರೆಚ್ಚರಿಕೆ ||ಜಾಹ್ನವಿ ಸ್ನಾನಸಂಧ್ಯಾನ ಧಾನ್ಯವ ಸುಜಾÕನ ಮುಂದೆ ಜ್ಞಾಚ್ಚರಿಕೆಜಾನಕಿರಮಣನ ಧ್ಯಾನವೆ ಧರ್ಮ ಸಂತಾನ ಮುಂದೆಚ್ಚರಿಕೆ 2

ಮಡದಿ ಮಕ್ಕಳೆಂಬ ಕಡುಮೋಹಕೆ ಸಿಲುಕಿ ಕೆಡಬೇಡವೆಚ್ಚರಿಕೆನಡೆವಾಗ ನುಡಿವಾಗ ಗಿಡವೆಲ್ಲ ನೆಂಟರು ಕಡೆಗಿಲ್ಲ ಎಚ್ಚರಿಕೆ ||ಕೊಡುಗೈಯ ಮಾಡದೆ ಮಡುಗಿದ ಧನ ಸಂಗಡ ಬಾರದೆಚ್ಚರಿಕೆ |ಒಡೆಯ ಶ್ರೀ ಪುರಂದರವಿಠಲನ ನೆನೆದು ನೀ ಕಡೆ
******