Showing posts with label ರಂಗ ರಂಗನಾಥ ಬೇಗ ಬಾರೋ krishnavittala. Show all posts
Showing posts with label ರಂಗ ರಂಗನಾಥ ಬೇಗ ಬಾರೋ krishnavittala. Show all posts

Monday, 2 August 2021

ರಂಗ ರಂಗನಾಥ ಬೇಗ ಬಾರೋ ankita krishnavittala

ರಂಗ ರಂಗನಾಥ ಬೇಗ ಬಾರೋ ಪ


ತುಂಗಮಹಿಮ ಬಂದು ಭವಭಂಗ ಮಾಡೋ ಅ.ಪ


ತಂದೆಯೆಂದು ಇಂದು ಬಂದೆ ಕುಂದುಎಲ್ಲಹಿಂದುದೂಡೋ

ಮುಂದುಮಾಡಿ ಛಂದಭಕ್ತಿ ಕಂದನೆಂದು ಕೈಯ ಪಿಡಿಯೋ 1

ಬಂಧುವಲ್ಲೆ ನೀನೇ ಜಗಕೆ ನಂದಶಯಸ ಬಂಧಮೋಚಕಾ

ಬಂದು ಬಂದು ಭವದಿನೊಂದೆ ಎಂದು

ಕಾವೆ ಪೇಳುಗೋವಿಂದಾ 2

ಬಿಂಬನೀನು ಹೌದು ಪ್ರತಿಬಿಂಬ ನಾನು ನನ್ನ ವ್ಯಾಪಾರ

ಬಿಂಬ ನಿನ್ನಾಧೀನವಿರಲು

ಅಂಬೋದೇಕೋ ದೋಷಿಯೆಂತೆನ್ನಾ 3

ಹಂಬಲವ ಬಿಟ್ಟುಸಕಲ ನಂಬಿದೆನೋ ಸ್ವಾಮಿಯೆಂತೆಂದು

ತುಂಬಿಶುಧ್ದ e್ಞÁನ ಭಕುತಿ ಅಂಬುಜಾಕ್ಷಯಿಂಬು ನೀಡೈಯ್ಯಾ4

ನೀನೇ ಮುಕ್ತಿ ನೀನೆ ಭುಕ್ತಿ ನೀನೇ ಪ್ರಾಣ ನೀನೆಸರ್ವಸ್ವ

ಏನು ಇನ್ನು ಮಾಡಲಾಪೆ ನೀನೆವಲಿದು ಕಾಯಬೇಕೈಯ್ಯ5

ದೋಷದೂರ ನಾಶರಹಿತ ವಾಸುದೇವ ಪೂರ್ಣ ಸುದ್ಗುಣಾ

ತೋಷಕಾಯ ಶ್ರೀಶನಿನ್ನ ದಾಸನೆಂದು ಒಪ್ಪಿಕೊಳ್ಳಯ್ಯ 6

ಏಕಾನೇಕರೂಪ ಸಕಲ ಲೋಕ ಸೃಜಿಸಿ ಅಳಿವೆ ಅನೀಕಾ

ಬೇಕು ಎನಿಪೆ ಭಕ್ತರಲ್ಲಿ ಸಾಕಬೇಕು ಶ್ರೀಗೆ ನಾಯಕ 7

ವೇದ ವೇದ್ಯ ವೇದಾತೀತ ಮೋದ ಪೂರ್ಣ ಬಾದರಾಯಣಾ

ಆದಿಮಧ್ಯ ಅಂತ್ಯದೂರ ಸಾಧುಪ್ರಾಪ್ಯನೇಮ ವರ್ಜಿತಾ 8

ಶರಣು ಶರಣು ಮಧ್ವಸದನ ಶರಣು ಶರಣು ಬೃಹತಿಪ್ರತಿಪಾದ್ಯ

ಶರಣು ಶರಣು “ಕೃಷ್ಣವಿಠಲ” ಶರಣು ರಂಗ ಕರುಣಾ ಸಾಗರ9

****