ಮನಸಿನನುತಾಪವನು ಪರಿಹರಿಸು ಹರಿಯೇ ಪ
ವನಜ ನಾಭನು ನೀನೇ ಮನದ ಪ್ರೇರಕನಲ್ಲವೇ ಅ.ಪ.
ಅನುದಿನದಿ ಧನವನಿತೆ _ ಎಂತೆಂಬ ಕಾನನದಿ
ಮನಸು ಮಾಡೀ ಬಹಳ _ ಶ್ವಾನನಂದದಿ ತಿರಿದೇ
ಕನಸಿಲಾದರು ನಿನ್ನ _ ಧ್ಯಾನವನು ಮಾಡದೆಲೆ
ಮನುಜ ಪಶುವೆನಿಸಿದೆನು _ ದೀನವತ್ಸಲ ಸ್ವಾಮಿ 1
ಸಂಸಾರ ವೆಂಬುವುದು _ ಹಿಂಸೆರೂಪವೆಸಿದ್ಧ
ಹಂಸರೂಪಿಯ ಮರೆತ _ ಸಂಶಯಾತತಜನಕೆ
ಧ್ವಂಸ ಗೈಸಿ ವಿಷಯ _ ವಾಸನೆಯ ತರಣಿಯನು
ಕಂಸ ಮರ್ಧನ ಶೌರಿ _ ದಾಸನೆನ್ನನು ಮಾಡಿ2
e್ಞÁನ ತಿರುಳನು ತಿಳುಹಿ _ ಧ್ಯಾನಬಗೆಯನು ಅರುಹಿ
ಮಾನಾಭಿಮಾನವನು _ ನಿನಗೆ ಸಮರ್ಪಿಸಿ ಸು
e್ಞÁನಿಗಳ ಸಹ ಶ್ರೀ ಕೃಷ್ಣವಿಠಲನ ನಿತ್ಯ
ಗಾನದಲಿ ಮೆಚ್ಚಿಸುವ ಭಾಗ್ಯ ಶೀಲನ ಮಾಡೀ 3
****