ಶ್ರೀ ಜಗನ್ನಾಥದಾಸರ ಶಿಷ್ಯ ವರ್ಗದಲ್ಲಿ ಶ್ರೀ ಪ್ರಾಣೇಶ ದಾಸರ ನಂತರದಲ್ಲಿ ಶ್ರೀ ಶ್ರೀದ ವಿಠ್ಠಲರಿಗೆ ವಿಶಿಷ್ಟ ಸ್ಥಾನವಿದೆ. ನಂತರ ಶ್ರೀ ಶ್ರೀಶವಿಠ್ಠಲರದು. ಅವರ ಶಿಷ್ಯರೇ ಶ್ರೀ ಗುರು ಶ್ರೀಶವಿಠ್ಠಲರು.
ದಾಸರ ನೆರೆನಂಬಿರೋ । ಗುರು ।
ಶ್ರೀಶ ದಾಸರ ನೇರೆನಂಬಿರೋ ।
ದಾಸರ ನೆರೆ ನಂಬಿ -
ಲೇಸು ಪೊಂಡಿಸಿ ಮನದ ।
ಕ್ಲೇಶವ ಕಳದಭಿಲಾಷೆ -
ಪೂರೈಸುವ ।। ಪಲ್ಲವಿ ।।
ಸುರಧೇನು ಮನೆಯೊಳಗಿರಲು
ಮಜ್ಜಿಗೆ ಬಯಸಿ ।
ಪರರಲ್ಲಿ ಪೋಗಿ ಬಾಯಿ
ತೆರೆವುದ್ಯಾತಕೆ ಹರಿ ।। ಚರಣ ।।
ಅಕ್ಷಯಾತ್ಮ ಕಲ್ಪವೃಕ್ಷ ತಾನಿರುತಿರೆ ।
ಕುಕ್ಷಿಗೋಸುಗ ಪೋಗಿ
ಭಿಕ್ಷಾ ಬೇಡುವುದ್ಯಾಕೆ ।। ಚರಣ ।।
ಸಂತತಾ ಕೈಯೊಳು
ಚಿಂತಾಮಣಿಯು ಯಿರಲು ।
ಭ್ರಾಂತನಾಗಿ ಅನ್ಯ ಚಿಂತೆ
ಮಾಡುವದ್ಯಾತಕೆ ।। ಚರಣ ।।
ಸುರನದಿ ಮನೆ ಮುಂದೆ
ಪರಿಯಲು ಉದಕಕೆ ।
ವರತಿಯಾತೆಗುವಾ ಬ್ಯಾ-
ಸರದ ಧಾವತಿಯಾಕೆ ।। ಚರಣ ।।
ತುತುಪದ್ಯಾತಕೆ ಬಳರಾ
ಪ್ರತಿದಿನದಲಿ । ಲಕ್ಷ್ಮೀ ।
ಪತಿವಿಠ್ಠಲನ ಪಾದಾ-
ಶ್ರಿತರೆ ಭಕುತಿಯಲಿ ।। ಚರಣ ।।
*****