Showing posts with label ಮಂಗಳೆನ್ನಿರೆ ಉಮಾ ಮನೋಹರಗೆ ದಿವಾಂಗನೆಯರು ಬಂದು ಬೇಗನೆ tandevaradagopala vittala. Show all posts
Showing posts with label ಮಂಗಳೆನ್ನಿರೆ ಉಮಾ ಮನೋಹರಗೆ ದಿವಾಂಗನೆಯರು ಬಂದು ಬೇಗನೆ tandevaradagopala vittala. Show all posts

Thursday, 5 August 2021

ಮಂಗಳೆನ್ನಿರೆ ಉಮಾ ಮನೋಹರಗೆ ದಿವಾಂಗನೆಯರು ಬಂದು ಬೇಗನೆ ankita tandevaradagopala vittala

 ..

kruti: tandevaradagopala vittala (ಪ್ರಹ್ಲಾದಗೌಡರು)

ಮಂಗಳೆನ್ನಿರೆ ಉಮಾ ಮನೋಹರಗೆ ದಿವಾಂಗನೆಯರು ಬಂದು ಬೇಗನೆ ಪ

ಛಂದದಾರುತಿ ತಂದು ಬೆಳಗಿರೆ ಇಂದುಧರಸುತ ಮಂದಜಾಸನಗೆ ಅ.ಪ.

ಮೋದಬಡುತಲಿ ಮೋದಪುರ ನಿವಾಸ ಜನರಭಿಲಾಷೆ ಸಲಿಸುವ ಚಾರುನವಕುಶ ತೀರನದಿ ಧರ ಧೀರ ಸುಗುಣ ಸುಶಾಸ್ತ್ರ ಪೇಳ್ವಸುತನಾರ್ಯರಿಗೆ ಬಂದು ಬೇಗನೆ 1

ದೋಷದೂರ ವಿಶೇಷ ಮಹಿಮನು ದಾಸ ಜನರಿಗೆ ತೋಷಗರೆಯುತ ಶೇಷಗಿರಿಯೊಳು ವಾಸಮಾಡಿದವೀರಗಮನಸುರೇಶ ಸನ್ನುತ ಬ್ರಹ್ಮೇಶತಂದೆವರದಗೋಪಾಲವಿಠ್ಠಲನ ದಾಸನೆನಿಪಗೆ ಬಂದು ಬೇಗನೆ 2

***