Showing posts with label ಎಷ್ಟು ಸೇವಿಸಲೋ ಕೃಷ್ಣ ಹೊಟ್ಟೆ ತುಂಬುತ್ತಿಲ್ಲೋ jeevesha vittala. Show all posts
Showing posts with label ಎಷ್ಟು ಸೇವಿಸಲೋ ಕೃಷ್ಣ ಹೊಟ್ಟೆ ತುಂಬುತ್ತಿಲ್ಲೋ jeevesha vittala. Show all posts

Wednesday, 3 February 2021

ಎಷ್ಟು ಸೇವಿಸಲೋ ಕೃಷ್ಣ ಹೊಟ್ಟೆ ತುಂಬುತ್ತಿಲ್ಲೋ ankita jeevesha vittala

 ಎಷ್ಟು ಸೇವಿಸಲೋ ಕೃಷ್ಣ ಹೊಟ್ಟೆ ತುಂಬುತ್ತಿಲ್ಲೋ | ಏನು ಇಟ್ಟೆ ರುಚಿ ನಿನ್ನ ನಾಮದಲಿ | ಪೂರ್ವ ಜನ್ಮ ಸುಕೃತ ಫಲವಲ್ಲದೆ ||ಪ||


ಘನ್ನ ಸುಖದ ಸಂಗ ಚೆನ್ನವೆಂದು ಅರಿತು ನಿನ್ನ ಮರೆವೆ ನಲ್ಲೋ ಗೊಲ್ಲ ನೀ ಬರಲು ಮೆಲ್ಲನೆ ನುಡಿಗಳು ತಾನಾಗೆ ತೊದಲುವುದೋ ತಾನು ತಾನಾಗೆ ತೊದಲುವುದೋ |1||


ಬುದ ಜನರು ಬಂದು ನಿನ್ನ ನಾಮವ ಪೇಳಿ 

ಮೃಷ್ಟಾನ್ನ ನೀಡಿದರೋ | ಮಂದ ನಾನಾಗಲು ಚೆಂದದ ಭೋಜನ ಹ್ಯಾಂಗ ರುಚಿಸುವಾದೋ ನನಗ್ಯಾಂಗ ರುಚಿಸುವಾದೋ ||2||


ಅಲ್ಪ ಸಮಯದ ರುಚಿ ಬಹಳವಾಗಿದೆ ಎಂದು ಶರಣಾದೆನೂ ನಾನು | ಕರೆದು ನೀ ಬಡಿಸಲು  ಯನ್ನಯ ಹೊಟ್ಟೆ ತುಂಬೊಗಿಹುದಲ್ಲೋ ಕೃಷ್ಣ ಹೊಟ್ಟೆ ತುಂಬೊಗಿಹುದಲ್ಲೋ ||3||


ಅಬ್ಬರ ಮಾಡುತ ಬೊಬ್ಬೆ ಹಾಕುತ ಬಲು ನೊಂದುಕೊಂಡೆನು ನಾನು | ಚೆಂದ ಹನುಮಯ್ಯನು ಎದೆಯಲ್ಲಿ ನಿಲ್ಲಲಾಗಿ ಮಯೆ ಗಳೆಲ್ಲವು ಮರೆಯಾದವೋ ಮಯೆ ಗಳೆಲ್ಲವು ಮರೆಯಾದವೋ  ||4|| 


ಒಂದು ದಿನದ ಹಸಿವೆ ನೀಗಿದರಾಗದೋ ನಿತ್ಯವು ನೀ ಸಲಹೋ ಸತ್ಯ ಜೀವೇಶ ವಿಠ್ಠಲನ ಸ್ಮರಣೆಯು ತೇಗು ತರಿಸುವುದು ಸಕಲರಿಗೆ ತೇಗು ತರಿಸುವುದು ಸಕಲರಿಗೆ ||5||

***