ತುಲಾಭಾರ tulabhara
ಲೋಕಸಂಚಾರಿ ನಾರದರು ಭೇಟಿ...
ಇತ್ತರು ಕೃಷ್ಣನ ಅರಮನೆಗೊಮ್ಮೆ !!
ದೇವಪಾರಿಜಾತವನು ಕೃಷ್ಣನಿಗರ್ಪಿಸಿ,
ಇಷ್ಟಮಡದಿಗೆ ನೀಡೆಂದರು...!
ಬಳಿಯಿದ್ದ ರುಕ್ಮಿಣಿಗೆ ಆ ಹೂವ ಕೊಟ್ಟನು ವಾಸುದೇವನು..!!
ಕೃತಾರ್ಥಳಾದಂತೆ ಮುಡಿಗೇರಿಸಿದಳು
ಸಹಧರ್ಮಿಣಿಯು...!
ಸಖಿಯಿಂದ ಇದ ತಿಳಿಯಲ್ಪಟ್ಟ....
ಸತ್ಯಭಾಮೆಗೆ.... ಪತಿಯಿಂದ ನಿಕೃಷ್ಟಕೆ
ಒಳಗಾದೆನೆಂ ಮರುಗುತಾ...ಸಿಡುಕುತಾ
ಅಬ್ಬರಿಸುತಾ , ವಲ್ಲಭನೇ ಎದುರು ಬಂದರೂ ಕಾಣದೇ ಕೋಪಾವೇಶಕ್ಕೆ..
ಈಡಾದಳು...!
ಸಂತೈಸುವ ಮಾತುಗಳೆಷ್ಟಾಡಿದರೂ
ಸಮಾಧಾನವಿರದ ಭಾಮೆಯು...
ಪತಿಯ ಪ್ರೀತಿ ನಿರಂತರ ತನಗೇ... ಬೇಕೆನ್ನುವ ವ್ರತವೇನಾದರೂ ಇದ್ದರೆ..
ಪೇಳಿರೆಂದು ನಾರದರಿಗೆ ಅರಿಕೆ ... ಮಾಡಿದಳು...!
ಲೋಕ ಕಲ್ಯಾಣಕೆ ಇಹುದೊಂದು..
ಅವಕಾಶವೆಂದು 'ಎಲ್ಲಾ ಕೃಷ್ಣ ಲೀಲೆ' ..
ಎನುತಲೀ ಸದುಪಯೋಗಿಸಿದರು...!!
ಪತಿಯನ್ನು ಸನ್ಯಾಸಿಗೊಬ್ಬನಿಗೆ ...
ದಾನ ನೀಡಿ...ಅವನ ತೂಕದಷ್ಟು...
ಚಿನ್ನಾಭರಣಗಳ ಕೊಟ್ಟು ಪುನರ್ಪಡೆದರೆ !!
ಪೂರ್ಣವಾಗಿ ಅವರೊಂದಿಗೇ.....
ಇರುವನೆಂಬ ಸತ್ಯವನರುಹಿದರು...!!
ಎಂದೂ ಯಾರೂ ಕೇಳಿರದಾ..ಹೇಳಿರದಾ,
ಸುಲಭ ವ್ರತವೆಂದು ಸಂತೋಷಿಸಿದ...
ಭಾಮೆಯು ತುಳಸಿನೀರಲ್ಲಿ ಪತಿಯನ್ನೇ...
ದಾನಕೊಟ್ಟಳು ಸರ್ವಸಂಗಪರಿತ್ಯಾಗಿ...
ಬ್ರಹ್ಮಮಾನಸಪುತ್ರ ನಾರದರಿಗೇ...!!!
ಹೊರಟರು ನಾರದರು ಕೃಷ್ಣನೊಡಗೂಡಿ
ಪೇಟೆಯ ಜನರ ಬಳಿ....
ಜಗನ್ನಾಥನ ಮಾರುವ ಉದ್ದೇಶದಲೀ....
ಸೂತ್ರಧಾರನ ನಾಟಕವ ಬೆರಗುಗಣ್ಣಿನಿಂ
ನೋಡಹತ್ತಿದರು....ದ್ವಾರಕೆಯ ಜನರು !!
ಸತ್ಯಭಾಮೆಯು ತಂದಿಟ್ಟಳು ತನ್ನಲ್ಲಿದ್ದ...
ಕೊಪ್ಪರಿಕೆಯ ಹಣ-ಚಿನ್ನಾಭರಣಗಳಾ...
ಕೂರಿಸಿದಳು ಕೃಷ್ಣನಾ ಒಂದು ತಕಡಿಯಲಿ
......ನೋಡುವುದೇನು....?
ಮಿಸುಕಲಿಲ್ಲ ತಕ್ಕಡಿ...ತರಹೇಳಿದಳು....
ಅರಮನೆಯಲ್ಲಿದ್ದ ಎಲ್ಲ ಆಭರಣಗಳಾ !!
ಏನಾಶ್ಚರ್ಯ......ಮಿಸುಕಲಿಲ್ಲ...!
ಸೋತವಳಂತಾಗಿ ...ನಾರದರನ್ನೇ ಉಪಾಯವನರುಹ ಬೇಕೆಂದು
ಬಿನ್ನವಿಸಿದಳು... ,,,,,,
"ರುಕ್ಮಿಣಿಯನು ಕರೆದು ತಾ" ಎಂದರು...
ಪಾದಗಳ ಬಳಿ ಕ್ಷಮೆಕೇಳುತಾ ಕರೆತಂದಳು
ಪಟ್ಟಮಹಿಷಿಯನು.......!!
"ತುಳಸಿದಳ" ಒಂದನು ಭಕ್ತಿಯಿಂ ಅರ್ಪಿಸಿದಳು..... ಕೃಷ್ಣನಿದ್ದ ಮತ್ತೊಂದು
ತಕ್ಕಡಿಗೇ.....!!
ಏರಿತು....ಮೇಲೇರಿತು....ತಕಡಿಯ ತಟ್ಟೆ
ಸಮನಾಯಿತು ಶ್ರೀ ಕೃಷ್ಣನ ತೂಕಕೆ !!!
ಸತ್ಯಭಾಮೆಯ ಅಹಂಕಾರವಳಿಯಿತು....
ಭಕ್ತಿಗೊಂದೇ ಕೃಷ್ಣ ಒಲಿಯುವವನೆಂದು
ಲೋಕಕೆ ಸಾರಿದರು ನಾರದಮಹರ್ಷಿಗಳು
ಭಕ್ತಿ ಮಾರ್ಗವ ಮೆಚ್ಚಿಕೊಳುವನು...
ಸಿದ್ಧದಾತನು ಆ ಪರಮಾತ್ಮನು...!!!
********