ಸದರವಲ್ಲವೊ ನಿಜ ಭಕುತಿ, ಸತ್ಯ
ಸದಮಲ ಗುರು ಕರುಣಾನಂದ ಮೂರುತಿ
ಅಡಿಯಲಂಬರ ಮಾಡೋ ತನಕ, ಅಗ್ನಿ
ಕಡಲುಂಡು ಮಲಿನ ಕೊನೆ ನೀಗೋ ತನಕ
ಒಡಲಿಬ್ಬರೊಂದಾಗೋ ತನಕ, ಆ
ಹಡೆಯದಂಥ ಹೆಣ್ಣು ಪ್ರಸವಾಗೋ ತನಕ
ನಾಡಿ ಹಲವು ಕೂಡೋ ತನಕ, ಬ್ರಹ್ಮ
ನಾಡಿ ಪೊಕ್ಕು ನಲಿದಾಡುವ ತನಕ
ಕಾಡುವ ಕಪಿ ಸಾಯೋ ತನಕ , ಸುಟ್ಟು
ಕಾಡಿನೊಳು ರಸ ತೊಟ್ಟಿಡೋ ತನಕ
ಆದಿಕುಂಭವ ಕಾಂಬೋ ತನಕ, ಅಲ್ಲಿ
ಸಾಧಿಸಿ ಅಮೃತ ಸವಿದುಂಬೋ ತನಕ
ಬಾಧೆ ಸಹಿಸಿ ಕೊಂಬೊ ತನಕ, ಆದಿ
ಪುರಂದರವಿಠಲನ ಸ್ಮರಿಸೋ ತನಕ
***
ರಾಗ ನಾದನಾಮಕ್ರಿಯಾ ಅಟ ತಾಳ (raga, taala may differ in audio)
pallavi
sadharavallavo nija bhakuti satya sadamala guru karuNAnanda mUruti
caraNam 1
aDiyalambara mADO tanaka agni kaDaluNDu malina kone nIkO tanaka
oDalibbarontAgO tanaka A haDeyadantha heNNu prasavAgO tanaka
caraNam 2
nADi halavu kUDO tanaka brahma nADi pokku nalitADuva tanaka
kADuva kapi sAyO tanaka suTTu kADinoLu rasa toTTiDO tanaka
caraNam 3
Adi kumbhava kAmbO tanaka alli sAdhili amrta savidumbO tanaka
bAdhe sahisi kombo tanaka Adi purandara viTTalana smarisO tanaka
***