Showing posts with label ಉಡುಪಿ ಕೃಷ್ಣನ ನೋಡಿರಿ ಶ್ರೀಹರಿ kamalanabha vittala. Show all posts
Showing posts with label ಉಡುಪಿ ಕೃಷ್ಣನ ನೋಡಿರಿ ಶ್ರೀಹರಿ kamalanabha vittala. Show all posts

Friday, 27 December 2019

ಉಡುಪಿ ಕೃಷ್ಣನ ನೋಡಿರಿ ಶ್ರೀಹರಿ ankita kamalanabha vittala

by ನಿಡಗುರುಕಿ ಜೀವೂಬಾಯಿ
ಉಡುಪಿ ಕೃಷ್ಣನ ನೋಡಿರಿ ಶ್ರೀಹರಿ ಚರಿತಸಡಗರವನು ಕೇಳಿರಿ ಪ

ಪೊಡವಿಯೊಳು ಸಮರಿಲ್ಲ ಈತನಉಡುಪ ಮುಖ ಶ್ರೀ ಕೃಷ್ಟರಾಯನಕಡಲತಡಿಯಲಿ ನೆಲಸಿದಾತನಮೃಡಪುರಂದರೊಡೆಯ ದೇವನ 1

ಮಧ್ವಸರೋವರ ಸ್ನಾನವ ಮಾಡುತ ಮನಶುದ್ದಭಾವದಿ ನಲಿದುಮಧ್ವಶಾಸ್ತ್ರÀವ ಸಾಧು ಸಜ್ಜನರಿಗೆ ಪೇಳ್ದಪದ್ಧತಿ ಮೀರದೆ ಶ್ರದ್ಧಾಭಕುತಿಯಿಂದ 2

ಮಧ್ಯದಲ್ಲಿಹ ಅನಂತೇಶ್ವರನನುಶುದ್ಧ ಭಕುತಿಲಿ ನಮಿಸಿ ಸ್ತುತಿಸುತಮುದ್ದು ಕೃಷ್ಣನ ಹೆಜ್ಜೆ ಪಂಙ್ತಯಶ್ರದೆÀ್ಧ ಸಡಗರ ನೋಳ್ಪಸುಜನರು 3

ಕಾಲಲಂದುಗೆ ಗೆಜ್ಜೆಯು ಕಯ್ಯೊಳು ಕಡ-ಗೋಲನೇಣನೆ ಪಿಡಿದುಬಾಲನಂದದಿ ಗೋಪಾಲರೂಪವ ತೋರ್ದಶ್ರೀ ಲಲಾಮನ ದಿವ್ಯ ಬಾಲಕೃಷ್ಣನರೂಪ4

ಬಾಲಯತಿಗಳು ವೇಳೆ ವೇಳೆಗೆಬಾಲಕೃಷ್ಣನ ಪೂಜೆ ಮಾಡುತಬಾಲರೂಪವ ನೋಡಿ ಸುಖಿಪರುಶೀಲಗುಣಸುರವರನ ಸ್ತುತಿಪರು5

ಮಧ್ವರಾಯರಿಗೊಲಿದು ಉಡುಪಿಯ ಮಣ್ಣ-ಗೆಡ್ಡೆಯೊಳಗೆ ಪೊಳೆದುಅದ್ವೈತಮತದ ಸದ್ದಡಗಿಸಿ ಮೆರೆದಂಥಮುದ್ದು ಸರ್ವಜÕರ ಆಜ್ಞಾಧಾರಕರೆಲ್ಲ 6

ಶುದ್ಧ ತತ್ವಜÕರು ರಚಿಸಿದಪದ್ಧತಿಯ ಸಾಧಿಸುತ ಸಂತತಶ್ರದ್ಧೆಯೊಳು ಹರಿಕಾರ್ಯ ನಡೆಸುವಶುದ್ಧಯತಿಗಳ ಸೇವೆಗೊಲಿಯುವ 7

ಪರಿಯಾಯದಿನ ಬರಲು ಶ್ರೀ ಹರಿಯನ್ನುಪರಿಪರಿವಿಧ ಪೂಜಿಸಿಪರಮವೈಭವದಿಂದ ಹರಿಯನ್ನುಕರತಂದುವರರಥÀವೇರಿ ಕುಳ್ಳಿರಿಸುವ ಭಕುತಿಯಲಿ 8

ಪರಿಪರಿಯ ವಾದ್ಯಗಳು ಮೊಳಗಲುಸರುವ ಯತಿಗಳು ನೆರೆದು ಹರುಷದಿಪರಮಮಂಗಳಮೂರ್ತಿಕೃಷ್ಣನಹರುಷದಲಿ ಕೊಂಡಾಡಿ ಸುತ್ತಿಪರು 9

ಕೊರಳಕೌಸ್ತುಭಮಾಲೆಯು ವೈಜಯಂತಿಯುಮುರುಡಿ ಸರಪಣಿ ಗೆಜ್ಜೆಯುಪರಿಪರಿ ರತ್ನಾಭರಣಗಳ್ಹೊಳೆಯುತಜರದ ಪೀತಾಂ¨Àರದಿಂದ ಶೋಭಿಪ ದಿವ್ಯ 10

ಕನಕಕಸ್ತೂರಿ ತಿಲಕ ಫಣೆಯಲಿಮಿನುಗುತಿಹ ಸ್ತ್ರೀರೂಪಧರಿಸಿದಕನಕಪೀಠದಿ ಮೆರೆದ ಕಮಲ-ನಾಭವಿಠ್ಠಲನ ಸೇವಿಸುವ ಜನ11
********