Showing posts with label ಗುರುಗಳ ನೋಡಿರೈ ಜ್ಞಾನಿಗಳರಸ ವಿಜ್ಞಾನನಿಧಿಗಳ ಪಾಡಿರೈ parthasarathi vittala vijnananidhi teertha stutih. Show all posts
Showing posts with label ಗುರುಗಳ ನೋಡಿರೈ ಜ್ಞಾನಿಗಳರಸ ವಿಜ್ಞಾನನಿಧಿಗಳ ಪಾಡಿರೈ parthasarathi vittala vijnananidhi teertha stutih. Show all posts

Saturday, 1 May 2021

ಗುರುಗಳ ನೋಡಿರೈ ಜ್ಞಾನಿಗಳರಸ ವಿಜ್ಞಾನನಿಧಿಗಳ ಪಾಡಿರೈ ankita parthasarathi vittala vijnananidhi teertha stutih

ARALUMALLIGE PARTHASARATHI

ಶ್ರೀ ಪಾರ್ಥಸಾರಥಿವಿಠ್ಠಲರು ಗುರುಗಳಾದ ಶ್ರೀ ವಿಜ್ಞಾನನಿಧಿತೀರ್ಥರನ್ನು....

ಗುರುಗಳ ನೋಡಿರೈ । ಜ್ಞಾನಿಗ ।

ಳರಸ ವಿಜ್ಞಾನನಿಧಿಗಳ ಪಾಡಿರೈ ।। ಪಲ್ಲವಿ ।।


ಕ್ಲೇಶ ದೋಷ ರೋಷ ವಿಕಾರ ।

ಗಳನೆಲ್ಲ ಎದ್ದು ಗೆದ್ದಿದ್ದ ಧೀರ ।

ಜಪ ತಪ ಅನುಷ್ಠಾನದ ಸಾರ ।

ಜ್ಞಾನ ಭಕ್ತಿ ವೈರಾಗ್ಯದ ಸದ್ವಿಚಾರ ।। ಚರಣ ।।


ಮುಳಬಾಗಿಲಿನ ದಿವ್ಯ ಅತಿಶಯದ ಜಾಗದಿ ।

ಬೃಹತೀ ಸಹಸ್ರ ವಿಷ್ಣು ಮಹಾಯಾಗದಿ ।

ಕಲಿಯುಗದಲ್ಲಿ ಕೃತ ಯುಗ ಧರ್ಮದ ।

ಸಂಸ್ಥಾಪಿಸಿದ ಯತಿಕುಲ ತಿಲಕ ।। ಚರಣ ।।


ಎಲ್ಲೆಲ್ಲೂ ಸಂಚರಿಸಿ ಉಪದೇಶ ನೀಡುತ ।

ಬಳಿಗೆ ಬಂದವರ ಭವ ನಾಶ ಮಾಡುತ ।

ಮತಿವಂತರಿಗೆ ಸತ್ಪಂಥ ತೋರಿಸಿ ।

ವರ ವಿಜ್ಞಾನ ಸಂಸ್ಥೆಯ ಸ್ಥಾಪಿಸುತ ।। ಚರಣ ।।


ಪಾರ್ಥಸಾರಥಿವಿಠ್ಠಲನ ಕೀರ್ತಿ ಎಲ್ಲೆಡೆ ಪಸರಿಸಿ ।

ವಸುಧೆ ಸುರರಿಗೆಲ್ಲ ಭೂರಿ ಭೂರಿ ದಾನವನಿತ್ತ ।। ಚರಣ ।।

****