..
kruti by ಲಕ್ಷ್ಮೀನಾರಯಣರಾಯರು Lakshminarayanaru
ಶಂಕರ ಲೋಕ ಶಂಕರ ಭವ ಭಯಂಕರ ಪ
ಶಂಕರ ತ್ವತ್ಪದ ಪಂಕಜದಲಿ ಮನ
ಶಂಕೆಯಿಲ್ಲದೆ ಕೊಟ್ಟು ಕಿಂಕರನನು ಪೊರೆ 1
ಮೃತ್ಯುಪಾಶಕೆ ಸಿಕ್ಕಿ ತತ್ತರಿಸುತಲಿದ್ದ
ಭಕ್ತನ ಸಲಹಿದ ಮೃತ್ಯುಂಜಯ ಸಲಹೆನ್ನ 2
ವಿಷವು ಆವರಿಸಲು ತ್ರಿದಶರು ಬೇಡಲು
ನಸುನಗುಗಲಿ ವಿಷ ಧರಿಸಿದ ಸದಾಶಿವ 3
ಶಿವಶಿವಾವಲ್ಲಭ ಭವಾಭವ ಪ್ರಭವನೆ
ಭುವನ ಪವಿತ್ರನೆ ಭವಹರ ಸಲಹೆನ್ನ 4
ಅಂಬಿಕನಾಥನೆ ನಂಬಿದೆ ನಿನ್ನನೆ
ಶಂಭುವೆ ಭಕ್ತನ ಬೆಂಬಿಡದೆಲೆ ಪೊರೆ 5
ಅಷ್ಟ ವಿಭೂತದ ಅಷ್ಟಮೂರ್ತಿಯೆ ಪದ
ಮುಟ್ಟಿ ಭಜಿಪ ಮನ ಕೊಟ್ಟು ರಕ್ಷಿಸು 6
ದಿಗಂಬರ ದಯಾಕರ ಭಗೀರಥ ಹಿತಕರ
ಅಘಹರ ಮೃಗಧರ ಹಗರಣಗೊಳಿಸಿದೆ 7
ವಿಘ್ನಪ ಜನಕನೆ ಅಜ್ಞತೆ ಬಿಡಿಸಯ್ಯ
ಸುಜ್ಞನೆ ಭವಾಂಬುಧಿ ಮಗ್ನನನುದ್ಧರಿಸಯ್ 8
ಲಕುಮಿಕಾಂತನ ಪ್ರಿಯಸÀಖನೆ ಶ್ರೀಕಂಠನೆ
ಭಕುತಿ ಭಾಗ್ಯವನೀಯೊ ಶಕುತ ಬಿಡದೆ ಕಾಯೊ 9
***