ರಾಗ : ಮೋಹನ ಆದಿತಾಳ
ಶ್ರೀ ವಿಜಯದಾಸರ ಕೃತಿ
ಗುರುವಂಶಕೆ ನಮೊ ಎಂಬೆ ನಮ್ಮ ।
ಮರುತಮತಾಬ್ದಿಗೆ ನಮೊ ಎಂಬೆ ॥ ಪ ॥
ಶ್ರೀಮದಾನಂದತೀರ್ಥ ಪದ್ಮನಾಭರಿಗೆ ।
ರಾಮದೇವರ ತಂದ ನರಹರಿಗೆ ॥
ಕಾಮಿತ ಫಲವೀವಾ ಮಾಧವಾಕ್ಷೋಭ್ಯರಿಗೆ ।
ಆ ಮಹಾಮಹಿಮಾ ಜಯತೀರ್ಥರಾಯರಿಗೆ ॥ 1 ॥
ವಿದ್ಯಾಧಿರಾಜರಿಗೆ ವಿಜಯ ಕವೀಂದ್ರರಿಗೆ ।
ಸದ್ಗುಣ ವಾಗೀಶ ರಾಮಚಂದ್ರಗೆ ॥
ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ ।
ಅದ್ವೈತಮತ ಖಂಡ ರಘೂತ್ಮರಾಯರಿಗೆ ॥ 2 ॥
ವೇದವ್ಯಾಸ ವಿದ್ಯಾಧೀಶ ವೇದನಿಧಿಮುನಿಗೆ ।
ಸಾಧುಜನ ಪ್ರಿಯ್ಯ ಸತ್ಯವ್ರತರಿಗೆ ॥
ಮೇದಿನಿಯಲ್ಲಿ ಮೆರೆದ ಸತ್ಯನಿಧಿತೀರ್ಥರಿಗೆ ।
ವಾದಿಗಜಕೆ ಸಿಂಹ್ವ ಸತ್ಯನಾಥರಿಗೆ ॥ 3 ॥
ಯತಿಶ್ರೇಷ್ಠ ಸತ್ಯಾಭಿನವತೀರ್ಥರಿಗೆ ।
ಸತತ ಸಜ್ಜನಪಾಲ ಸತ್ಯಪೂರ್ಣಗೆ ॥
ಅತಿಶಯವಾನಂದ ಸತ್ಯವಿಜಯರಿಗೆ ।
ಮತ ಉದ್ಧಾರಕ ಶ್ರೀಸತ್ಯಪ್ರಿಯಗೆ ॥ 4 ॥
ಇಂತು ಗುರುಗಳ ಸಂತತಿ ಕೊಂಡಾಡಿ ।
ಕಿಂತು ಸಂತಾಪವನುರುಹಿ ಬಿಟ್ಟು ॥
ಸಂತೋಷ ನಾನಾದೆ ವಿಜಯವಿಟ್ಠಲನ್ನ ।
ಚಿಂತಿಯಾ ಮಾಡುವ ದಾಸರ ದಯದಿಂದ ॥ 5 ॥
***
pallavi
guru vamshaka namO embe namma marutamatAbdige namO embe
caraNam 1
shrImad Ananda tIrtha padmanAbharige rAma dEvara tanda naraharige
kAmita phalavIva mAdhava kSObyarige A mahA mahima jaya tIrtha rAyarige
caraNam 2
vidyAdhi rAjarige vijaya kavIndta susadguNa vAgIsha rAmacandrarige
vidyAnidhi raghunAtha raghuvarya tIrtharige advaita matha khaNDa ragOttama rAyarige
caraNam 3
vEdavyAsa vidyAdhIsha vEdanidhi munige sAdhujana priya nitya vratharige
mEdiniyelli mereda satyanidhi tIrtharige vAdi gajake simha satyanAtharige
caraNam 4
yati shrEStha satyAbhinava tIrtharige satata sajjanapAla satya pUrNarige
atishatavAnanda satya vijarige matha uddhAraka shrI satya priyarige
caraNam 5
intu gurugaLa santati koNDADi intu santApavanaruhu biTTu
santOSi nAnAda vijaya viThalanna cintiya mADuve dAsara dayadinda
****