Showing posts with label ಶ್ರೀವೇಣುಗೋಪಾಲ ಕೃಷ್ಣಾ ಕಾವುದೈ ಪರಿಹರಿಸಿ ನೀನೆನ್ನ ಕೃಷ್ಣಾ gadugina veeranarayana. Show all posts
Showing posts with label ಶ್ರೀವೇಣುಗೋಪಾಲ ಕೃಷ್ಣಾ ಕಾವುದೈ ಪರಿಹರಿಸಿ ನೀನೆನ್ನ ಕೃಷ್ಣಾ gadugina veeranarayana. Show all posts

Wednesday, 1 September 2021

ಶ್ರೀವೇಣುಗೋಪಾಲ ಕೃಷ್ಣಾ ಕಾವುದೈ ಪರಿಹರಿಸಿ ನೀನೆನ್ನ ಕೃಷ್ಣಾ ankita gadugina veeranarayana

 ..

kruti by ವೀರನಾರಾಯಣ Veeranarayana 


ಶ್ರೀ ವೇಣುಗೋಪಾಲ ಕೃಷ್ಣಾ ಕಾವುದೈ ಪರಿಹರಿಸಿ ನೀನೆನ್ನ ಕೃಷ್ಣಾ ಪ


ಶ್ರೀ ವ್ಯಾಸರಾಯಾರ್ಜಿತ ಕರುಣಾ ದೇವಾದಿನುತಚರಣ ಗುಣಗಣಾಭರಣ ಅ.ಪ.


ಭೂಮಿ ಆಕಾಶಾದಿ ಸಕಲವನು ವ್ಯಾಪಿಸಿದಪ್ರೇಮದಿಂ ನಿನ್ನಂಶವನು ಪೂರ್ಣಗೊಳಿಸಿದನೇಮದಿಂ ಜಾಂಬುವತಿ ಭಕುತಿಯಿಂ ಪೂಜಿಸಿದಭೀಮರಥಿಯಿಂ ಬಂದು ಶ್ರೀ ವ್ಯಾಸರಾಯಗೊಲಿದ 1


ಅಚ್ಚೆಯದ ಪುರಂದರ ಕಚ್ಚು ನೈವೇದ್ಯಕ್ಕೆಮೆಚ್ಚಿಯತಿ ವ್ಯಾಸರನು ಅಚ್ಚರಿಯಗೊಳಿಸಿದಹುಚ್ಚು ಕುರುಬಗೆ ಜಗನ್ನಾಥದಾಸರ ಜನುಮದಿಚ್ಛೆಯನು ವ್ಯಾಸರಿಂ ಪೂರೈಸಿ ಮೆರೆಯುತಿಹ 2


ಕನ್ನಡದ ರಾಜ್ಯವೆಂದೆನಿಸಿದ ವಿದ್ಯಾನಗರದುನ್ನತಿಯ ಗೈದ ಯತಿ ವ್ಯಾಸರನು ಪಟ್ಟದೊಳುಸನ್ನಹಿಸಿ ಘನ ಕೃಷ್ಣ ನರಪತಿಗೆ ಬಂದಿದ್ದಬನ್ನ ಕುಹುಯೋಗವ ಸಂಹರಿಸಿ ಪಾಲಿಸಿದ 3


ಪ್ರಾಣಯತಿ ಹರ ವ್ಯಾಸರಾಯಾದಿ ಹರಿದಾಸಜಾಣರನು ಕುಣಿಸಲಿಕೆ ನಾದವನು ಕೊಡಲೆಂದುವೇಣುವನು ಊದುತ್ತೆ ಮೋದಿಸುವನೆಂಬಂತೆಕಾಣಿಸುವ ರೀತಿಯಲಿ ನರ್ತಿಸುತ ನಿಂತಿರುವ 4


ವ್ಯಾಸರಂದದಿ ಧರ್ಮದುಪದೇಶ ಮಾಡುತ್ತೆದೇಶದೊಳು ಪಸರಿಸಲು ಲಕ್ಷ್ಮೀಶ ತೀರ್ಥರನುಶಾಸನವ ಗೈದುಪನ್ಯಾಸಕ್ಕೆ ನೇಮಿಸಿದಶ್ರೀಶ ಗದುಗಿನ ವೀರನಾರಾಯಣನು ಎಂಬ 5

***