Showing posts with label ಗುರುವಾದಿರಾಜ ರವಿಕೋಟಿ ತೇಜಾ vijaya vittala GURU VADIRAJA RAVIKOTI TEJA VADIRAJA STUTIH. Show all posts
Showing posts with label ಗುರುವಾದಿರಾಜ ರವಿಕೋಟಿ ತೇಜಾ vijaya vittala GURU VADIRAJA RAVIKOTI TEJA VADIRAJA STUTIH. Show all posts

Thursday, 26 December 2019

ಗುರುವಾದಿರಾಜ ರವಿಕೋಟಿ ತೇಜಾ ankita vijaya vittala GURU VADIRAJA RAVIKOTI TEJA VADIRAJA STUTIH

 ರಾಗ ಪೂರ್ವಿಕಲ್ಯಾಣಿ  ಆದಿತಾಳ 

Audio by Mrs. Nandini Sripad

ಶ್ರೀ ವಿಜಯದಾಸರ ಕೃತಿ 


ಗುರು ವಾದಿರಾಜ ರವಿಕೋಟಿ ತೇಜಾ ।
ಶರಣೆಂಬೆನಯ್ಯಾ ಸತತಗೇಯಾ ॥ ಪ ॥

ನಂಬಿದೆನು ನಿನ್ನ ದಯ ಸಂಪನ್ನ ।
ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ ॥ 1 ॥

ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ ।
ಭೇದ ಜ್ಞಾನವೆ ಎಂಬೊ ನಿಜವೆಂಬ ಫಲ್ಲಾ ॥ 2 ॥

ಮಾಯಿಗಳ ವದ್ದ ಮಮತಾ ಗೆದ್ದ ।
ಗಾಯನ ಪ್ರಸಿದ್ಧ ಗುಣದಲಿ ಇದ್ದ ॥ 3 ॥

ನಾನಾ ಚಾರಿತ್ರ ತೋರಿದ ಮಿತ್ರ ।
ಧೇನಿಸಿ ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ ॥ 4 ॥

ಸಂತತ ವಿರಕ್ತ ಜೀವನ ಮುಕ್ತಾ ।
ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ ॥ 5 ॥

ಸ್ವಾದಿಪುರವಾಸ ಸಾಧುಗುಣ ಭಾಸಾ ।
ಸದ್ಭಕುತ ಪೋಪ ಮಧ್ವಮುನಿಯ ದಾಸಾ ॥ 6 ॥

 ವಿಜಯವಿಠ್ಠಲನ್ನ ನೆನೆಸುವ ಘನ್ನ ಹರಿ ।
ತ್ರಿಜಗ ಹಯವದನನ್ನ ಪರನೆಂಬೊ ಪೂರ್ಣಾ ॥ 7 ॥
***

Guru vadiraja ravikoti teja
Saranembenayya satatageya ||pa||

Nambidenu ninna daya sampanna
Sambramadallenna poreyo prasanna ||1||

Vedasastra balla balire malla
Beda suj~janave embo nijavemba Pala ||2||

Mayigala vadda mamata gedda
Gayana prasiddha gunadali idda ||3||

Nana caritra torida mitra
Siri hariya gatradolitta patra||4||

Santata virakta jivana mukta
Santari susakta harinama bokta ||5||

Svadipuravasa sadhuguna basa
Sadbakuta popa madhvamuniya dasa ||6||

Vijayaviththalanna nenesuva Ganna hari
Trijaga hayavadananna paranembo purni||7||
***


ಗುರು ವಾದಿರಾಜ ರವಿಕೋಟಿ ತೇಜಾ
ಶರಣೆಂಬೆನಯ್ಯಾ ಸತತಗೇಯಾ ||pa||

ನಂಬಿದೆನು ನಿನ್ನ ದಯ ಸಂಪನ್ನ
ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ ||1||

ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ
ಭೇದ ಸುಜ್ಞಾನವೆ ಎಂಬೊ ನಿಜವೆಂಬ ಫಲ ||2||

ಮಾಯಿಗಳ ವದ್ದ ಮಮತಾ ಗೆದ್ದ
ಗಾಯನ ಪ್ರಸಿದ್ಧ ಗುಣದಲಿ ಇದ್ದ ||3||

ನಾನಾ ಚಾರಿತ್ರ ತೋರಿದ ಮಿತ್ರ
ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ||4||

ಸಂತತ ವಿರಕ್ತ ಜೀವನ ಮುಕ್ತಾ
ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ ||5||

ಸ್ವಾದಿಪುರವಾಸ ಸಾಧುಗುಣ ಭಾಸಾ
ಸದ್ಭಕುತ ಪೋಪ ಮಧ್ವಮುನಿಯ ದಾಸಾ ||6||

ವಿಜಯವಿಠ್ಠಲನ್ನ ನೆನೆಸುವ ಘನ್ನ ಹರಿ
ತ್ರಿಜಗ ಹಯವದನನ್ನ ಪರನೆಂಬೊ ಪೂರ್ಣಿ||7||
*******