ಮಾರುತಿ ಮಜ್ಜನಕ ಮಾರುತಿ ||ಪ||
ಮಾರುತಿ ಕರುಣಿಸು ಜ್ಞಾನ ಎನ್ನ
ಸೇರಿದ ಸತತ ಅಜ್ಞಾನ ಆಹ
ದೂರ ಓಡಿಸಿ ಹರಿಆರಾಧನೆಯಿತ್ತು
ತೋರಿಸು ಪಥ ಸರ್ವಾಧಾರ ಉದ್ಧಾರನೆ ||ಅ.ಪ||
ದ್ವಿತೀಯ ಯುಗದೊಳವತರಿಸಿ ಸೀತಾ-
ಪತಿಯ ಪಾದಕೆ ನಮಸ್ಕರಿಸಿ ರವಿ-
ಸುತಗೆ ಒಲಿದು ಉದ್ಧರಿಸಿ ಆಬ್ಧಿ
ಅತಿವೇಗದಿಂದ ಉತ್ತರಿಸಿ ಆಹಾ
ಕ್ಷಿತಿಜದೇವಿಯನು ತುತಿಸಿ ಮುದ್ರಿಕೆಯಿತ್ತು
ದಿತಿಜರ ಸದೆದ ಭಾರತಿಯ ರಮಣನೆ ||೧||
ಕುರುಕುಲದೊಳಗೆ ಉದ್ಭವಿಸಿ ಬಲು
ಗರಳ ಪದಾರ್ಥವ ಸಲಿಸಿ ಚೆಲ್ವ
ತರುಣಿ ರೂಪವನೆ ಶೃಂಗರಿಸಿ ನಿಶಾ-
ಚರ ಕೀಚಕನ ಸಂಹರಿಸಿ ಆಹಾ
ಜರೆಯ ಸುತನ ಸೀಳಿ ಧರಣಿಪಾಲಕರನ್ನು
ಸೆರೆಯ ಬಿಡಿಸಿ ಕಾಯ್ದ ಪರಮಸಮರ್ಥನೆ ||೨||
ಭೂತಲದೊಳಗೆ ಯತಿಯ ಚೆಲುವ
ರೂಪ ತೋರಿದ ಶುಭಕಾಯ ಮಾಯಾ-
ಮತವನಳಿದ ಮುನಿರಾಯ ಕಾಯಾ
ಜಾತಜನಕಗತಿಪ್ರಿಯ ಆಹಾ
ಭೂತನಾಥನೆ ಪರಮಾತ್ಮನೆಂಬಂಥ
ಪಾತಕರರಿ ಜಗನ್ನಾಥವಿಠ್ಠಲದೂತ ||೩||
****
ರಾಗ ಶಂಕರಾಭರಣ (ಭೈರವಿ) ಅಟತಾಳ (raga, taala may differ in audio)
pallavi
mAruti majjanaka mAruti
anupallavi
mAruti karuNisu jnAna enna sErida satata ajnAna Aha dUravODisi hariyArAdhaneyittu tOrisu patha sarvAdhAra uddhArane
caraNam 1
dvitIya yugadoLavatarisi sItApatiya pAdake namaskarisi ravi sutage olidu uddharisi abbhi
ativEgadina uttarisi Aha kSitija dEviyaLanu tutisi mudrikeyittu ditijara sadeda bhAratiya ramaNane
caraNam 2
kurukuladoLage uddharisi balu garaLa padArthava salisi celva taruNi rUpavane shrangarisi nishAcara
kIcakana samharisi AhA jareya sutana sILi dharaNi pAlakarannu tereya biDisi kAida parama samarthane
caraNam 3
bhUtaladoLage yatiya celuva rUpa tOrida shubhakAya mAyA matavanaLida munirAya kAyA
jAta janaka gatipriya AhA bhUtanAthane paramAtanembanta pAtakarari jagannAtha viThala dUta
***