..
kruti by ವೀರನಾರಾಯಣ Veeranarayana
ಜಯಮಂಗಳಂ ಪ
ಬುದ್ಧಿಯನಾಳ್ವಂಗೆ ಸಿದ್ಧಿಯನೀವಂಗೆ ಉದ್ದನ್ನ ಒಡಲಿಂಗೆ ವಿಘ್ನಗಳ ಕೊಲ್ವಂಗೆಶುದ್ಧ ಹಿಮಗಿರಿಯ ಸುತೆಯ ಮುದ್ದಾದ ಕುವರಂಗೆಜಿದ್ದಿನಲಿ ಶಣ್ಮುಖನ ಗೆದ್ದಂಥ ಜಾಣಂಗೆ 1
ಶಂಕರನ ಕುವರನಿಗೆ ಓಂಕಾರ ರೂಪನಿಗೆಸಂಕಷ್ಟನಾಶನಿಗೆ ಅಂಕುಶಾಯುಧ ಧರಗೆಹೂಂಕರಿಪ ಜನಕುಳ್ಳ ಬಿಂಕವನು ತರಿದವಗೆಕಿಂಕರದ ನಿರುತದಲಿ ಕರುಣದಲಿ ಕಾಯ್ವನಿಗೆ 2
ಶುಭಕಾರ್ಯದಲಿ ಮೊದಲು ಪೂಜೆಗೊಂಬಾತನಿಗೆಅಭಯವನು ತೋರ್ಪನಿಗೆ ಇಭವದನ ಗಣಪಗೆಪ್ರಭುವಾಗಿ ಗಣಗಳಿಗೆ ಜಗದೊಳಗೆ ಮೆರೆವವಗೆವಿಭವದಲಿ ಬಿಡುವಿಲ್ಲದೆ ಭಾರತವ ಬರೆದಂಗೆ 3
ಸೂಕ್ಷ್ಮದಲಿ ಪರಿಕಿಸಲು ಸಣ್ಣ ಕಣ್ಣುಳ್ಳವಗೆಕಾಂಕ್ಷೆಗಳ ಕೇಳಲಿಕೆ ಮರದಗಲ ಕಿವಿಯವಗೆತೀಕ್ಷ್ಣತರ ಮತಿವಿಡಿದ ಘನವಾದ ತಲೆಯವಗೆಸುಕ್ಷೇಮ ಲಾಭಗಳ ಭಕ್ತರಿಗೆ ಕೊಡುವವಗೆ 4
ಇಲಿದೇರ ವೀರನಿಗೆ ಸುಲಿದೇಕದಂತನಿಗೆಎಲರುಣಿಯನುಪವೀತ ಮಾಡಿಕೊಂಡವಗೆನೆಲದೊಳಗೆ ಗದಗುಸಿರಿ ವೀರನಾರಾಯಣನನೊಲಿಸಿ ಕೊಡುವಂಥ ಮಂಗಳ ಮೂರುತಿಗೆ 5
***