ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳಿರೋ ಕೇಳಿರೋ ಆಲಿಸಿ ಜನರು | ಕಲಿಯುಗದೊಳಗ ಒಡಿಯ ನಾಟವನು ಪ
ಫುಲ್ಲನಾಭನ ಭಕ್ತಿ ಎಳ್ಳೆನಿತಿಲ್ಲಾ | ಹುಲ್ಲು ಕಲ್ಲು ದೈವಕ ಎರಗಿ ನಡೆವರು | ಬೆಲ್ಲವು ಕಹಿಯಾಗಿ ಸಿಹಿ ಬೇವಾಯಿತು | ಅಲ್ಲ-ಹುದೆಂಬುದು ಬಲ್ಲವರಾರು 1
ಸಾಧು ಸಂಗಕ ಕಾಲು ಏಳುವು ನೋಡಿ | ಸಾಧಿಸಿ ದುರ್ಜನರಾ ನೆರಿಯ ಸೇರುವರು | ಮಾಧವ ನಾಮ ಉಣ್ಣಲು ಮುಖರೋಗ | ಭೂದೇವಿ ನಿಸ್ಸಾರವಾದಳು ನೋಡಿ2
ನೀಚರಿಗುದ್ಯೋಗ ಊಚರಿಗಿಲ್ಲ | ಆಚಾರ ಸದ್ಗುಣ ಆಡವಿ ಸೇರಿದವು | ಯೋಚಿಸಿ ಒಬ್ಬರಿ ಗೊಬ್ಬರು ಕೇಡಾ | ಭೂಚಕ್ರದೊಳು ಎಲ್ಲಾ ತೀರಿ ತಿಂಬುರೈಯಾ3
ಇಲಿಯು ಹೆಗ್ಗಣ ಹೆಚ್ಚಿ ತೋಳ ಬಡಿದು | ದಾಳಿಯಿಟ್ಟವು ಲಂಕಾ ಯೋಧ್ಯದ ನಡುವೆ | ಇಳಿಯೊಳು ಹತ್ತೆಂಟು ಕಾಲ-ವೀಪರಿಯಾ | ತಲಿ ತಲಿಗಿನ್ನು ನಾಯಕರಾಗಿ ಇರಲು 4
ಮ್ಯಾಲೊಬ್ಬ ನಿಂದಲಿ ಸುಖದಲಿ-ರಲಿಕ್ಕೆ | ಕುಲ ಅನ್ಯ ಇಲ್ಲದ ರಾಜೇಶನಾ | ಕಾಲಿಲಿ ಸರ್ವ ಸಂಕರ ವಾಗುತಿರಲು | ಹೊಳೆವನು ಗುರುಮಹಿಪತಿ ಸುತ ಸ್ವಾಮಿ 5
***