Showing posts with label ನಮೋ ನಮೋ ನರಮೃಗರಾಜಾ ಸದಾ ನಮಿಪೆ shyamasundara. Show all posts
Showing posts with label ನಮೋ ನಮೋ ನರಮೃಗರಾಜಾ ಸದಾ ನಮಿಪೆ shyamasundara. Show all posts

Saturday, 1 May 2021

ನಮೋ ನಮೋ ನರಮೃಗರಾಜಾ ಸದಾ ನಮಿಪೆ ankita shyamasundara

 " ಕೊಪ್ಪರ ಶ್ರೀ ನರಸಿಂಹ ದೇವರ ಸ್ತುತಿ "

ರಾಗ : ತೋಡಿ ತಾಳ : ಝಂಪೆ


ನಮೋ ನಮೋ ನರಮೃಗರಾಜಾ । ಸದಾ ।

ನಮಿಪೆ ಸುಜನರಿಗೆ ಅಮರ ಮಹಿಜ ।। ಪಲ್ಲವಿ ।।


ಕಮಲಸಂಭವ ಸುಮನಸೇಂದ್ರ ಪ್ರಮುಖ ।

ನಮಿತ ಸುಮಹಿಮ । ಗಜರಿಪು ।

ದಮನ ದ್ವಿಜವರ ಗಮನ ಗುಣನಿಧಿ ।

ಕಮಲೆಯಳ ಮುಖ ಕುಮುದ ಹಿಮಕರ ।। ಅ. ಪ ।।


ಜಾತ ರಹಿತ ಜಗಧೀಶ । ದನು ।

ಜಾತ ವ್ರಾತಾರಣ್ಯ ಜಾತ ವೇಧಸ ।

ಶೀತಾಂಶು ಭಾನು ಸಂಕಾಶ । ಶ್ರೀ ಭೂ ।

ನಾಥ ಭೂತೇಶ ಹೃತ್ಪಾಥೋಜ ವಾಸ ।।

ಶಾತಕುಂಭಕಶ್ಯಪನ ಗರ್ವ । ಜೀ ।

ಮೂತ ವೃಂದಕೆ ವಾತನೆನಿಸುತ ।

ಪೋತ ಪ್ರಹ್ಲಾದಗೆ ಒಲಿದು । ಸಂ ।

ಪ್ರೀತಿಯಲಿ ಪೊರೆದಾತ ದಾತನೆ ।। ಚರಣ ।।


ಮಾತುಳ ವೈರಿ ಗೋಪಾಲ । ವೇಣು ।

ಗೀತ ಸಂಪ್ರೀತ ಶ್ರೀ ರುಕ್ಮಿಣೀ ಲೋಲ ।

ಧಾತಾಂಡೋಧರ ವನಮಾಲಾ ದೃತ ।

ಪೂತನ ಬಕ ಶಕಟಾರಿ ಹೃತ್ಶೂಲ ।।

ಪಾತಕಾದ್ರಿ ಶತಧಾರ ಶುಭಕರ ।

ಶ್ವೇತದ್ವೀಪಾನಂತ ಪೀಠ । ಪು ।

ನೀತ ವರ ವೈಕುಂಠ ಘನ । ಸು ।

ಕೇತನ ತ್ರಯವೀತ ಭವ ಭಯಹರ ।। ಚರಣ ।।


ಮಾರ ಜನಕ ಶುಭಕಾಯ ಕೃಷ್ಣಾ ।

ತೀರ ಸುಶೋಭಿತ ಕಾರ್ಪರ ನಿಲಯ ।

ದೂರ ನೋಡದೇ ಪಿಡಿ ಕೈಯ್ಯ । ಶ್ರೀ ಸ ।

ಮೀರ ಸನ್ನುತ ಶ್ಯಾಮಸುಂದರೇಯ ।।

ವಾರಿಚರ ಗಿರಿ ಭಾರಧರ । ಭೂ ।

ಚೋರ ಹರ ಗಂಭೀರ ವಟು । ಕು ।

ಠಾರಕರ ರಘುವೀರ । ನಂದ ।

ವಸನ ವಿದೂರ ಹಯಧ್ವಜ ।। ಚರಣ ।

***