Showing posts with label ಕಾಯೋ ಕಾಯೋ ಕಮಲಯತಾಕ್ಷ ತೋಯಧಿಯೊಳು jagannatha vittala KAAYO KAAYO KAMALAYATAAKSHA TOYADHIYOLU. Show all posts
Showing posts with label ಕಾಯೋ ಕಾಯೋ ಕಮಲಯತಾಕ್ಷ ತೋಯಧಿಯೊಳು jagannatha vittala KAAYO KAAYO KAMALAYATAAKSHA TOYADHIYOLU. Show all posts

Saturday, 4 December 2021

ಕಾಯೋ ಕಾಯೋ ಕಮಲಯತಾಕ್ಷ ತೋಯಧಿಯೊಳು ankita jagannatha vittala KAAYO KAAYO KAMALAYATAAKSHA TOYADHIYOLU




ಜಗನ್ನಾಥದಾಸರು
.ಕಾಯೋ ಕಾಯೋ ರಂಗಾ ಕಮಲಾಯತಾಕ್ಷಾ ||ಪ||

ಕಾಯೋ ಕಾಯೋ ಕಮಲಾಯತಾಕ್ಷಾ 
ಭವ ತೋಯದಲಿ ಬಿದ್ದು ಬಾಯ ಬಿಡುವೆನು ||ಅ.ಪ||

ಅದ್ವೈತತ್ರಯದಧ್ವಪ್ರವರ್ತಕ 
ಸದ್ವೈಷ್ಣವರ ಪದದ್ವಯ ತೋರಿ ||೧||

ಸಂಜೆಯ ತೋರಿ ಧನಂಜಯನುಳುಹಿದ  
ಕುಂಜರವರದ ನಿರಂಜನಮೂರ್ತೇ ||೨|| 

ಕುಕ್ಷಿಯೊಳಂದು ಪರೀಕ್ಷಿದ್ರಾಜನ 
ರಕ್ಷಿಸಿದಂದದಿ ಪ್ರತ್ಯಕ್ಷದಲಿ ||೩|| 

ನೀ ದಯಮಾಡದಿರಿ ದಿವಿಜರು ವೊಲಿ 
ದಾದರಿಸುವರೆ ವೃಕೋದರ ವಂದ್ಯ ||೪||

ಅಧಮನು ನಾನಹುದಧಿಮಥನ 
ಸನ್ಮುದಮುನಿಮತ ಪೊಂದಿದವರಣುಗನಾ ||೫||

ಕ್ಷುದ್ರಭೂಮಿಪರುಪದ್ರವ ಕಳೆದು 
ಸುಭದ್ರವೀಯೊ ಕಲ್ಪದ್ರುಮದಂತೆ ||೬||

ಸತ್ಯಕಾಮ ತವ ಭೃತ್ಯಗೆ ಬಂದಪಮೃತ್ಯು 
ಕಳೆದು ಸಂಪತ್ತು ಪಾಲಿಸಿದಿ ||೭||

ಎಲ್ಲರೊಳಿಹ ಕೈವಲ್ಯದರಸು 
ನೀ ಬಲ್ಲಿದನೆಂಬುದು ಬಲ್ಲೆ ಬಹುಬಗೆ ||೮|| 

ವೀತಭಯ ಜಗನ್ನಾಥವಿಠಲ 
ಸುಖೇತರ ಕಳೆದು ಮಹಾತಿಶಯದಲಿ ॥೯॥
***

Kayo kayo ranga kamalayataksha ||pa||

Kayo kayo kamalayataksha 
bhava toyadali biddu baya biduvenu ||a.pa||

Advaitatrayadadhvapravartaka 
sadvaishnavara padadvaya tori ||1||

Sanjeya tori dhananjayanuluhida 
kunjaravarada niranjanamurte ||2|| 

Kukshiyolandu parikshidrajana 
rakshisidandadi pratyakshadali ||3|| 

Ni dayamadadiri divijaru voli 
dadarisuvare vrukodara vandya ||4||

Adhamanu nanahudadhimathana 
sanmudamunimata pondidavaranugana ||5||

Kshudrabhumiparupadrava kaledu 
subhadraviyo kalpadrumadante ||6||

Satyakama tava bhrutyage bandapamrutyu 
kaledu sampattu palisidi ||7||

Ellaroliha kaivalyadarasu 
ni ballidanembudu balle bahubage ||8|| 

Vitabhaya jagannathavittala 
sukhetara kaledu mahatishayadali ||9||
***

pallavi

kAyO kAyO kAyO kamalAyatAkSa

anupallavi

kAyO kAyO kAyO kamalAyatAkSa bhavatOyadigaLu biddu bAya biDuve bEgadi bandu

caraNam 1

advataitraya dadhva pravatrtaka sadvaiSNava pAdadvaya tOri

caraNam 2

sanjaya tOri dhananjayanuLuhide manjuLa carita niranjana mUrtE

caraNam 3

kuSiyoLondu parIkSidrAjana rakSisidante prati pratikSNadi

caraNam 4

agamanu nAnuhudu dadhishayana sanmuda muni mata pondidaraNugana nI

caraNam 5

nI dayamADadaDE divijaru olidAdarisuvavE vrakOdara vondya

caraNam 6

satyAtmaka bhava bhratyage bandapamrtyu kaLedu sampattu pAlisi

caraNam 7

ellaroLagiha kaivalyadarase nI ballidanembuda balle bahubage

caraNam 8

kSudra bhUmi parupadrava kaLedu subadhravIyO kalpadrumadante

caraNam 9

vItabhaya jagannAtha viThala sukhEtara kaLedu mahAtishayadali
***


ರಾಗ ಬೇಹಾಗ್ (ಜೋಗಿಯಾ) ಆದಿತಾಳ(ದೀಪಚಂದಿ)

ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ||ಪ||

ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ಭವ
ತೋಯನಿಧಿಯೊಳು ಬಿದ್ದು ಬಾಯ ಬಿಡುವೆ ಬೇಗದಿ ಬಂದು ||ಅ,ಪ||

ಅದ್ವೈತತ್ರಯ ದಧ್ವಪ್ರವರ್ತಕ
ಸದ್ವೈಷ್ಣವ ಪಾದದ್ವಯ ತೋರಿ ||೧||

ಸಂಜೆಯ ತೋರಿ ಧನಂಜಯನುಳುಹಿದೆ
ಮಂಜುಳ ಚರಿತ ನಿರಂಜನ ಮೂರ್ತೇ ||೨||

ಕುಕ್ಷಿಯೊಳಂದು ಪರೀಕ್ಷಿದ್ರಾಜನ
ರಕ್ಷಿಸಿದಂತೆ ಪ್ರತಿ ಪ್ರತಿ ಕ್ಷಣದಿ ||೩||

ಅಧಮನು ನಾನಹುದು ದಧಿಶಯನ ಸನ್-
ಮುದಮುನಿ ಮತ ಪೊಂದಿದ ರಣುಗನ ನೀ ||೪||

ನೀ ದಯಮಾಡದಡೇ ದಿವಿಜರು ಒಲಿ-
ದಾದರಿಸುವರೇ ವೃಕೋದರ ವಂದ್ಯ ||೫||

ಸತ್ಯಾತ್ಮಕ ಭವಭೃತ್ಯಗೆ ಬಂದಪ-
ಮೃತ್ಯು ಕಳೆದು ಸಂಪತ್ತು ಪಾಲಿಸಿ ||೬||

ಎಲ್ಲರೊಳಿಹ ಕೈವಲ್ಯದರಸೆ ನೀ
ಬಲ್ಲಿದನೆಂಬುದ ಬಲ್ಲೆ ಬಹುಬಗೆ ||೭||

ಕ್ಷುದ್ರ ಭೂಮಿಪರುಪದ್ರವ ಕಳೆದು ಸು-
ಭದ್ರವೀಯೊ ಕಲ್ಪದ್ರುಮದಂತೆ ||೮||

ವೀತಭಯ ಜಗನ್ನಾಥವಿಠಲ ಸು-
ಖೇತರ ಕಳೆದು ಮಹಾತಿಶಯದಲಿ ||೯||
***


ಕಾಯೋ ಕಾಯೋ ಪ

ಕಾಯೋ ಕಾಯೋ ಕಮಲಯತಾಕ್ಷ ಭವ
ತೋಯಧಿಯೊಳು ಬಿದ್ದು ಬಾಯ ಬಿಡುವನ ಅ

ಅದ್ವೈತ ತ್ರಯದಧ್ವ ಪ್ರವರ್ತಕ
ಸದ್ವೈಷ್ಣವರ ಪದದ್ವಯತೋರಿ 1

ಸಂಜೆಯ ತೋರಿ ಧನಂಜಯನುಳುಹಿದ
ನಿರಂಜನ ಮೂರ್ತೆ 2

ಸತ್ಯಕಾಮ ತವ ಭೃತ್ಯೆಗೆ ಬಂದಪ
ಮೃತ್ಯು ಕಳೆದು ಸಂಪತ್ತು ಪಾಲಿಸಿದೆ 3

ಕುಕ್ಷಿಯೊಳಂದು ಪರೀಕ್ಷಿದ್ರಾಜನ
ರಕ್ಷಿಸಿದಂತೆ ಪ್ರತಿಕ್ಷಣದಲಿ 4

ಎಲ್ಲರೊಳಿಹ ಕೈವಲ್ಯದರಸು ನೀ
ಬಲ್ಲಿದನೆಂಬುದ ಬಲ್ಲೆ ಬಹು ಬಗೆ 5

ನೀ ದಯ ಮಾಡದಿರೀ ದಿವಿಜರು ಒಲಿ
ದಾದರಿಸುವರೆ ವೃಕೋದರ ವಂದ್ಯ 6

ಅಧಮ ನಾನಹುದುದಧಿ ಮಥನ ಸ
ನ್ಮುದ ಮುನಿಮತ ಪೊಂದಿದವರಣುಗನು 7

ಕ್ಷುದ್ರ ಭೂಮಿಪರುಪದ್ರವ ಕಳೆದು ಸು
ಭದ್ರವೀಯೋ ಕ್ಷುದ್ರುಮದಂತೆ 8

ವೀತಭಯ ಜಗನ್ನಾಥ ವಿಠಲ ಸುಖೇತರ ಕಳೆದು ಮಹಾತಿಶಯದಲಿ 9
**********