Showing posts with label ಪಂಡರಿನಾಥ ಪಾವನ ಸುಚರಿತ lakshmikanta. Show all posts
Showing posts with label ಪಂಡರಿನಾಥ ಪಾವನ ಸುಚರಿತ lakshmikanta. Show all posts

Sunday, 1 August 2021

ಪಂಡರಿನಾಥ ಪಾವನ ಸುಚರಿತ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಪಂಡರಿನಾಥ ಪಾವನ ಸುಚರಿತ ಪ


ಪಾಂಡವಪ್ರಿಯದೂತ ಶರಣರ ಕಾದುಕೊಂಡಿಹ ಖ್ಯಾತ ದಾತಅ.ಪ.


ಮಾತಾಪಿತನು ಭ್ರಾತನು ಹಿತನು

ನಾಥನು ಜ್ಞಾತನು ಸಂತಾರಕನು

ಮತಿಯೂ ನೀನೆ ಗತಿಯೂ ನೀನೆ

ಕಾತರ ವ್ಯಾತರದು ಬೀತುದು ದೇವ 1


ತನುಮನಧನಗಳ ನಿನಗರ್ಪಿಸಿದೆ

ಎನಿತಾದರು ಇಡು ಅನುಮಾನಿಸಿದೆ

ಜನರ ನಿಂದನೆ ಮೇಣಾನಂದನೆ

ಮಾನ ಅವಮಾನ ನಿನ್ನದು ದೇವ 2


ಚಿಂತೆಯ ಮರೆದೆ ಭ್ರಾಂತಿಯ ತೊರೆದೆ

ಸಂತರ ಚರಣವನಾಂತೆ ದೃಢದೆ

ಸ್ವಾಂತವು ಮೋದವಾಂತುದು ಶ್ರೀದ

ಸಂತತ ಶ್ರೀಕಾಂತ ನಿಶ್ಚಿತ ದೇವ 3

***