ಸಜ್ಜನರ ಸಂಗ ನೀಡೊ ಸರ್ವಪಾಲಕನೆ
ಮುದ್ದು ಗೋಪಿಯ ಕಂದ ಮೂರ್ಜಗದೊಳ್ವಂದ್ಯ ಪ
ಸಾಧುಜನಪ್ರಿಯನೆ ಯಾದವರಿಗೊಡೆಯನೆ
ಶ್ರೀದೇವಿ ಅರಸು ಶಿವ ಬ್ರಹ್ಮರಿಗುತ್ತಮನೆ
ಶ್ರೀಧರ ಲೋಕಾಧಿಪತಿ ಸದಾನಂದಭರಿತ ನಿನ
ಪಾದಪಂಕಜದಿ ನಿಜವಾದ ಭಕುತಿಯ ಕೊಡುವೊ 1
ದುಷ್ಟಜನ ಶಿಕ್ಷಕನೆ ಶಿಷ್ಟರ ಸಂರಕ್ಷಕನೆ
ಇಷ್ಟಫÀಲದಾಯಕ ಇಂದಿರೆಕಾಂತನೆ
ಕಷ್ಟದಾರಿದ್ರ್ಯ ಸಂಹಾರ ಭಯ ಛÉೀದಕÀನೆ
ಸೃಷ್ಟಿ ಸ್ಥಿತಿಲಯ ಕರ್ತೃ ಯುಧಿಷ್ಠಿರ(ನ)ನುಜನಸಖನೆ 2
ವಸುದೇವನ ಸುತನೆ ಶೇಷನ್ಹಾಸಿಕÉಯಲ್ಲಿ
ಶ್ರೀಸಹಿತ ಶಯನ ಕಂಸಾಸುರಾರಿ
ವಾಸವಿಯ ರಥ ನಡೆಸಿದ್ವರಲಕ್ಷ್ಮಿ ವಲ್ಲಭನೆ
ಕ್ಲೇಶ ಪರಿಹರಿಸೊ ಭೀಮೇಶಕೃಷ್ಣ ಎನಗೆ 3
***