kruti by Timmappa Dasaru
ಶೋಭನಂ ಶ್ರೀ ಶೋಭನಂ ಶ್ರೀಭೂವಲ್ಲಭ ವೆಂಕಟನಾಯಕ ಪ
ಇಲ್ಲದ ಮಾಯೆಯ ನಿರ್ಮಿಸಲು ಉಳ್ಳವ ನೀನದರೊಳಗಿರಲುನಿಲ್ಲದೆ ನಲಿಯುತ ಹಬ್ಬುತ ಹಸರಲು ಯೆಲ್ಲವು ನೀನಾಗಿರುತಿರಲು 1
ಯುಕ್ತಿಗಸಾಧ್ಯನು ನೀನಾಗಿ ಭಕ್ತರ ಪಾಲಿಸಬೇಕಾಗಿಶಕ್ತಿಗೊಡೆಯ ರಾಮಕೃಷ್ಣ ನೀನಾಗಿ ಭಕ್ತರ ಪಾಲಿಸಬೇಕಾಗಿ 2
ಕರುಣಾರ್ಣವನ ಕಟಾಕ್ಷದಲಿ ಪರಿಪರಿ ಕಾಮವ ಪಡೆಯುತಲಿತಿರುಪತಿ ವೆಂಕಟರಮಣನ ಮನದಲಿ ಸ್ಮರಿಸುತಲಿರೆ ಸಂಪತ್ತಿನಲಿ 3
ಓಂ ಯೋಗಿನೇ ನಮಃ
***