RSS song .
ಕೇಶವನ ಬಾಳೆಮಗೆ ಪ್ರೇರಣೆಯ ದೀಪ
ಮಾಧವನ ಸಾಧನೆಯು ಆದರ್ಶ ರೂಪ || ಪ || ಈಶ್ವರೀಯವು ನಮ್ಮ ದೇಶಧರ್ಮದ ಕಾರ್ಯ ಜನಮನವ ಜೋಡಿಸುವ ಸವಿನುಡಿಯು ವಿನಯ ವ್ಯಕ್ತಿತ್ವ ಕರ್ತೃತ್ವ ಅರ್ಪಿತವು ಸರ್ವಸ್ವ ‘ಯಾಚಿ ದೇಹೀ ಯಾಚಿ ಡೋಳ’ ಸಂಕಲ್ಪ || 1 || ಶುದ್ಧ ಜಂಗಮ ಸ್ನೇಹಿ ಲೌಕಿಕದಿ ನಿರ್ಮೋಹಿ ಆಧ್ಯಾತ್ಮದಲಿ ರಕ್ತಿ ಅತುಲ ಧೀ ಶಕ್ತಿ ಹೆಜ್ಜೆ ಗುರುತುಗಳೆಲ್ಲ ಯುಗದೃಷ್ಟಿ ನವಸೃಷ್ಟಿ ಸದ್ದಿರದೆ ಸರಿವ ಬಗೆ ‘ಮೈ ನಹೀಂ ತೂ ಹೀ’ || 2 || ಸ್ವೀಕೃತವು ಮಾರ್ಗವಿದು ನಡೆ ನಿಮ್ಮ ಅನುಚರಣ ಸೋಕಲೆದೆಯನು ನಿಮ್ಮ ತೇಜದಾ ಕಿರಣ ತೀರಿಸಲು ತಾಯ ಋಣ ಶ್ರಮಿಸುವೆವು ಪ್ರಾಣಪಣ ವೀರವ್ರತ ಧರಿಸಿಹೆವು ತೊರೆದು ಸುಖತಲ್ಪ || 3 ||
***

***