Showing posts with label ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು vijaya vittala. Show all posts
Showing posts with label ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು vijaya vittala. Show all posts

Wednesday, 16 October 2019

ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು ankita vijaya vittala

ವಿಜಯದಾಸ
ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು
ನಾನೊಲ್ಲೆ ನಾನೊಲ್ಲೆ ಸರ್ವೇಶಾ ಪ

ನಿನ್ನನುರಾಗದಿ ಗತಿಯೆಂದು ನಂಬಿದ
ಮಾನವನೊಡನೆ ನೀನಾಡುವದೆಲ್ಲಾ ಅ.ಪ

ಷಡುರಸ ನಾನಾ ಸುಭೋಜನವ ಬಿಡಿಸಯ್ಯ ದಾನವ ಭಂಜನ
ಒಡಲಿಗೋಸುಗ ನಿನ್ನನು ಸೇವಿಸುವೆ
ತೋರಿಸದಿರೆ | ದಿವ್ಯಾಂಬರಗಳ
ಉಡಿಸಿ ಸ್ವರ್ಣಾಭರಣಗಳ ತೊಡಿಸಿ | ಬರಿ ಮಾತಿನಲಿ ಮೊರೆ
ಯಿಡುವೆನೊ ವಾಕ್ಕಾಯದಿಂದಲೀ 1

ಜನರು ಜನಪರಿಂದ ಮನ್ನಣೆ ಸ್ವಲ್ಪ |
ಎನಗೆ ಹತ್ತದು ಕಾಣೊ ನಿನ್ನಾಣೆ ||
ಮನುಜನ ಸೈಸಿದವನ ಬಾಯೆನೆ ಬರೆವಾ |
ವಿಭವ ದೊರೆಯದೆ |
ಜನುಮದಲಿ ಬಂದದಕೆ ಮಹಾ ಸಾಧನವಿಧಾರಿ ತೋರಿಸಿ |
ನಿನ್ನ ದಾಸನೆನಿಸದೆ | ನಿಸ್ಸಾರವೆಣಿಸಿ ತೋರ್ಪ ದೇವ ಸೈಸೈ 2

ಥಂಡ ಥsÀಂಡದಲೆನ್ನ ಮರುಗಿಸಿ |
ಮಂಡಲದೊಳು ಪ್ರಚಂಡನೆನಿಸದಿರು |
ಉಂಡ ಪರಾನ್ನಕೆ ದಂಡನೆ ಬಹಳಲ್ಲಿ |
ತೊಂಡ ನಾನಯ್ಯ ಕರುಣಸಾಗರ |
ಖಂಡ ಮತಿಯನು ಕೊಡದೆ ಮುಕ್ತರ |
ಅಂಡ ಜಾಂಸಗ ವಿಜಯವಿಠ್ಠಲಾ 3
*******