Showing posts with label ರಾಘವೇಂದ್ರ ಸದ್ಗುಣಸಾಂದ್ರಾ gurujagannatha vittala. Show all posts
Showing posts with label ರಾಘವೇಂದ್ರ ಸದ್ಗುಣಸಾಂದ್ರಾ gurujagannatha vittala. Show all posts

Friday, 27 December 2019

ರಾಘವೇಂದ್ರ ಸದ್ಗುಣಸಾಂದ್ರಾ ankita gurujagannatha vittala

by ಗುರುಜಗನ್ನಾಥದಾಸರು
ರಾಘವೇಂದ್ರಾ - ಸದ್ಗುಣಸಾಂದ್ರಾ ಪ

ರಾಘವೇಂದ್ರಾ ಅನು - ರಾಗದಿ ಭಕ್ತರರೋಗವ ಕಳೆದು ಸು - ಭೋಗವ ಸಲಿಸೋ ಅ.ಪ

ಧೀಮಂತರಿಗತಿ - ಕಾಮಿತವೀವೊಶ್ರೀಮಂತನೆ ಎನ - ಕಾಮಿತ ಸಲಿಸೋ 1

ಆಪದ್ಬಾಂಧವ - ಕೋಪವ ಮಾಡದೆನೀ ಪಾಲಿಸೋ ಎನ್ನ - ಪಾಪವ ನೋಡದೆ 2

ಅನ್ಯನಲ್ಲವೊ - ನಿನ್ನ ಸುಭಕ್ತನುಮನ್ನಿಸಿ ದಯದಿ ನೀ - ಎನ್ನನು ಕಾಯೋ 3

ಜನ್ಯನ ಜನಕನು - ಮನ್ನಿಸದಿರಲುಅನ್ಯರು ಕಾಯ್ವರನನ್ಯಪಾಲಕನೇ 4

ಈಶನು ನೀನೈ - ದಾಸನು ಎನ್ನನು -ದಾಶಿನ ಮಾಡದೆ - ಪೋಷಿಸಿ ಪೊರೆಯೈ 5

ಎಂದಿಗೆ ನಿನ್ನನು - ಪೊಂದುವೆ ಗುರುವರತಂದೆಯೆ ತೋರಿಸೋ - ಮುಂದಿನ ಗತಿಯಾ 6

ಪೋತನು ನಾನೈ - ಮಾತನು ಲಾಲಿಸೊನೀತ ಗುರುಜಗನ್ನಾಥ ವಿಠಲ ಪ್ರಿಯ 7
*******