Showing posts with label ತಾರೆನ್ನ ಹುಂಡಿ ರಂಗ ತಾರೆನ್ನ ಹುಂಡಿ shreeda vittala. Show all posts
Showing posts with label ತಾರೆನ್ನ ಹುಂಡಿ ರಂಗ ತಾರೆನ್ನ ಹುಂಡಿ shreeda vittala. Show all posts

Sunday, 1 August 2021

ತಾರೆನ್ನ ಹುಂಡಿ ರಂಗ ತಾರೆನ್ನ ಹುಂಡಿ ankita shreeda vittala

 ..

kruti by Srida Vittala Dasaru  Karjagi Dasappa


ತಾರೆನ್ನ ಹುಂಡಿ ರಂಗ

ತಾರೆನ್ನ ಹುಂಡಿ ಪ


ಅತ್ತರೇನು ಕಂಗಳಿಂದ

ಮುತ್ತುದುರುವುದಿಲ್ಲ

ಮತ್ತೆ ನಮ್ಮ ಮೇಲೆ ಹುಂಡಿ

ಹೊತ್ತರೆ ನೀ ಬಿಟ್ಟೆಯೇನೊ 1


ವಾರಿಜಾಕ್ಷ ನಿನ್ನ ಬಿಡು -

ವರೆಯೇನೋ ಬೆನ್ನ ಮೇಲೆ

ಹಾರಿ ಹೊತ್ತು ಕೊಂಡು ಭಾರ

ಹೇರದೆ ನೀ ಬಿಟ್ಟೆಯೇನೊ 2


ತೊಟ್ಟಿಲ ಹೋಗೆಂದರೆ

ಸಿಟ್ಟು ಮಾಡುವಿಯೋ ಶ್ರೀದ-

ವಿಠಲನ್ನ ಕೂಡಾಡದೆ ನೀ

ಬಿಟ್ಟರೆ ನಾವು ಬಿಡುವರಲ್ಲ 3

***