Showing posts with label ಎನ್ನ ಜನ್ಮ ಸಫಲವಾಯಿತು ಎನ್ನನುದ್ಧರಿಸಲಾಗದೆ purandara vittala. Show all posts
Showing posts with label ಎನ್ನ ಜನ್ಮ ಸಫಲವಾಯಿತು ಎನ್ನನುದ್ಧರಿಸಲಾಗದೆ purandara vittala. Show all posts

Tuesday, 3 December 2019

ಎನ್ನ ಜನ್ಮ ಸಫಲವಾಯಿತು ಎನ್ನನುದ್ಧರಿಸಲಾಗದೆ purandara vittala

ರಾಗ ಆನಂದಭೈರವಿ. ಅಟ ತಾಳ

ಎನ್ನ ಜನ್ಮ ಸಫಲವಾಯಿತು
ಎನ್ನನುದ್ಧರಿಸಲಾಗದೆ ||ಪ||

ಎನ್ನ ಜನ್ಮ ಸಫಲವಾಯಿತನ್ಯರನು ಬಯಸಲೇಕೆ
ತನ್ನ ತಾನೊಲಿದ ವ್ಯಾಸಮುನಿರಾಯನ ಕೈಯ ಸೇರಿರೋ ||ಅ||

ಸಿರಿಯರಸನ ಕರುಣದಾಳು ಸರಸಿಜಸಂಭವನ ಪಿತನ
ಸುರರೊಡೆಯನ ಸಕಲ ವೇದವರಸುವಂಥ ಹರಿಯ
ಪರದೇವತೆ ಇದೇಇದೇಯೆಂದು ಕರಕಮಲದೊಳಿಟ್ಟು ತೋರುವ
ಪರಮಹಂಸ ವ್ಯಾಸರಾಯರ ಚರಣವ ನೆರೆನಂಬಿರೆಲ್ಲರು ||

ಜ್ಞಾನ ಭಕುತಿ ವೈರಾಗ್ಯವ ನಿಧಾನದಿ ನಮಗಿತ್ತು ಪೊರೆವ
ದಾನವಾರಿಯ ಗುಣಗಣವ ಬಲ್ಲ ಮೌನಿಗಳ ವರಶಿರೋರನ್ನನ
ತಾನೆ ದೇವರೆಂಬ ಅಸುರರ ಕಾನನವ ತರಿದೊಟ್ಟುವ
ಆನಂದ ತೀರ್ಥರ ಪಟ್ಟದಾನೆ ವ್ಯಾಸರಾಯರಿರಲು ||

ಹಿಂದೆ ಸಾವಿರ ಜಿಹ್ವೆಯಲಿ ಮುಕುಂದನಹಿರಾಜ ಪೊಗಳು-
ವಂದದಿಂದ ಹರಿಯ ಗುಣಗಳಿಂದು ತುತಿಸಿ ಸುಜನರ ಕೃಪೆ-
ಯಿಂದ ಪೊರೆವುತ್ತಭಿನವಪುರಂದರವಿಠಲನ್ನ ಜಗಕೆ
ತಂದು ತೋರುವ ವೈಷ್ಣವಕುಮುದೇಂದು ವ್ಯಾಸರಾಯರಿರಲು ||
***

pallavi

enna janma saphalavAyitu ennanuddharisalAgade

anupallavi

enna janma saphalavAyitanyaranu bayasalEke tanna tAnolida vyAsamuni rAyana kaiya sErirO

caraNam 1

siriyarasana karuNadALu sarasija sambhavana pitana suraroDeyana sakala vEda varasuvantha hariya
para dEvteyide idEyendu karakamaladoLiTTu tOruva paramahamsa vyAsarAyara caraNava nere nambirellaru

caraNam 2

jnAna bhakuti vairAgyava nidhAnadi namagittu poreva dAnavAriya guNagaNava balla maunigaLa vara
shirOnannanatAne dEvaremba asurara kAnanava taritoTTuva Ananda tIrttara paTTadAne vyAsarAyariralu

caraNam 3

hinde sAvira jihveyali mukundanahirAja pogaLu vandinda hariya guNagaLindu tutisi sujanara krpeyinda
porevuttabhinava purandara viTTalanna jagake tandu tOruva vaiSNava kumudEndu vyAsarAyariralu
***