Showing posts with label ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ others MANGALAM GURU SHREE CHANDRAMAULISHWARAGE. Show all posts
Showing posts with label ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ others MANGALAM GURU SHREE CHANDRAMAULISHWARAGE. Show all posts

Monday, 15 November 2021

ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ others MANGALAM GURU SHREE CHANDRAMAULISHWARAGE

singer vijay prakash


ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ ಶಕ್ತಿಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೇ || 

ಕಾಲಭೈರವಗೇ ಕಾಳಿ ದುರ್ಗಿಗೇ ವೀರ ಧೀರ ಶೂರ ಹನುಮ ಮಾರುತಿ ಚರಣಕ್ಕೇ ||

ಮಲ್ಲಿಕಾರ್ಜುನಗೇ ಚೆಲ್ವ ಜನಾರ್ದನಗೇ ಅಂಬಾಭವಾನಿ ಕಂಬದ ಗಣಪತಿ ಚಂಡಿಚಾಮುಂಡಿಗೇ || 

ವಿದ್ಯಾರಣ್ಯರಿಗೇ ವಿದ್ಯಾಶಂಕರಗೇ ವಾಗೀಶ್ವರಿಗೇ ವಜ್ರದೇಹ ಗರುಡಾಂಜನೇಯರಿಗೇ ||

ತುಂಗಭದ್ರೆಗೇ ಶೃಂಗನಿವಾಸಿನಿಗೇ ಶೃಂಗೇರಿಪುರದೊಳು ನೆಲೆಸಿರುವಂಥ ಶಾರದಾಂಬೆಗೇ || 

ಸಚ್ಚಿದಾನಂದ ಶಿವ ಅಭಿನವ ನೃಸಿಂಹಭಾರತಿಗೇ 

ಚಂದ್ರಶೇಖರಭಾರತೀ ಗುರು ಸಾರ್ವಭೌಮರಿಗೇ 

ಚಂದ್ರಶೇಖರಭಾರತೀ ಗುರು ವಿದ್ಯಾತೀರ್ಥರಿಗೇ

ಚಂದ್ರಶೇಖರಭಾರತೀ ಗುರು ಭಾರತೀತೀರ್ಥರಿಗೇ 

ಚಂದ್ರಶೇಖರಭಾರತೀ ವಿಧುಶೇಖರಭಾರತಿಗೇ ||

***